ಬರ್ಲಿನ್: ನಗರದ ದಕ್ಷಿಣ ಭಾಗದ ಹೊರವಲಯದಲ್ಲಿ ಬುಧವಾರ ತಡರಾತ್ರಿ ಗೋಚರಿಸಿದ ಸಿಂಹಿಣಿಯ ಸೆರೆಗಾಗಿ ಜರ್ಮನ್ ಪೊಲೀಸರು ಗುರುವಾರವೂ ಹೆಲಿಕಾಪ್ಟರ್, ಡ್ರೋನ್, ಇನ್‌ಫ್ರಾರೆಡ್ ಕ್ಯಾಮೆರಾ, ಪ್ರಾಣಿ ವೈದ್ಯರು ಹಾಗೂ ಬೇಟೆಗಾರರೊಂದಿಗೆ ಶೋಧ ನಡೆಸಿದರು.
ನಗರದ ಹೊರಭಾಗಕ್ಕೆ ಹೊಂದಿಕೊಂಡಂತಿರುವ ಕ್ಲೈನ್‌ಮ್ಯಾಕ್‌ನೌ ಪ್ರದೇಶದಲ್ಲಿ ಬುಧವಾರ ಮಧ್ಯರಾತ್ರಿ ಕಾಡು ಹಂದಿಯೊಂದನ್ನು ಹುಲಿಯೊಂದು ಬೆನ್ನಟ್ಟುತ್ತಿರುವುದನ್ನು ನೋಡಿದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ವಿಡಿಯೊ ಸಹ ಕೊಟ್ಟಿದ್ದಾರೆ.
ವಿಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದ ಪೊಲೀಸರು ಅದು ಸಿಂಹಿಣಿ ಎಂದು ನಿರ್ಧರಿಸಿದ್ದು, ಸೆರೆ ಹಿಡಿಯುವ ಕಾರ್ಯಾಚರಣೆಗಾಗಿ ಹೆಲಿಕಾಪ್ಟರ್ ಜೊತೆ 30 ಪೊಲೀಸ್ ವಾಹನಗಳನ್ನು ಬಳಸಿದ್ದಾರೆ. ಈ ಪ್ರದೇಶದಲ್ಲಿನ ಮನೆಗಳಲ್ಲಿ ಅಂದಾಜು 20 ಸಾವಿರ ಜನರು ವಾಸವಿದ್ದು, ಎಚ್ಚರದಿಂದಿರುವಂತೆ ಪೊಲೀಸರು ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.