ಬರ್ಲಿನ್ : ಜರ್ಮನಿಯಲ್ಲಿ ಮೊದಲ ಬಾರಿಗೆ ಎಂಪಾಕ್ಸ್ (ಮಂಕಿ ಪಾಕ್ಸ್) ವೈರಸ್ ಪ‍್ರಕರಣವನ್ನು ಪತ್ತೆಹಚ್ಚಲಾಗಿದೆ ಎಂದು ಜರ್ಮನಿ ರೋಗ ನಿಯಂತ್ರಣ ಕೇಂದ್ರವು ಮಂಗಳವಾರ ತಿಳಿಸಿದೆ.
‘ವಿದೇಶಕ್ಕೆ ತೆರಳಿದ್ದ ವೇಳೆ ವ್ಯಕ್ತಿಗೆ ಸೋಂಕು ತಗುಲಿದೆ’ ಎಂದು ರಾಬರ್ಟ್ ಕ್ವಾಚ್ ಇನ್‌ಸ್ಟಿಟ್ಯೂಟ್ ತಿಳಿಸಿದೆ. ಅವರಿಗೆ ಚಿಕಿತ್ಸೆ ನೀಡುತ್ತಿರುವ ಕುರಿತು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದೆ.
‘ಪರಿಸ್ಥಿತಿ ಕುರಿತು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದು, ಅಗತ್ಯಬಿದ್ದರೆ ಸಲಹೆಗಳನ್ನು ನೀಡಲಾಗುವುದು’ ಎಂದು ಸಂಸ್ಥೆಯು ತಿಳಿಸಿದೆ.
ಆಗಸ್ಟ್ ಮಧ್ಯಭಾಗದಲ್ಲಿ ಸ್ವೀಡನ್‌ನಲ್ಲಿ ಎಂಪಾಕ್ಸ್ ಮೊದಲ ಪ್ರಕರಣ ವರದಿಯಾಗಿತ್ತು. ಆಫ್ರಿಕಾ ಖಂಡದಲ್ಲಿ ಹೆಚ್ಚಿನ ಎಂಪಾಕ್ಸ್ ಪ್ರಕರಣಗಳು ದಾಖಲಾದ ಬಳಿಕ ವಿಶ್ವ ಆರೋಗ್ಯ ಸಂಸ್ಥೆಯು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಘೋಷಿಸಿತ್ತು.
ಇದುವರೆಗೂ ದಾಖಲಾದ ಹೆಚ್ಚಿನ ಪ್ರಕರಣಗಳು ಕಾಂಗೋ ದೇಶದಲ್ಲೇ ವರದಿಯಾಗಿವೆ. ಆಫ್ರಿಕಾ ಖಂಡದ 55 ದೇಶಗಳ ಪೈಕಿ 18ರಲ್ಲಿ ಎಂಪಾಕ್ಸ್ ಪ್ರಕರಣಗಳು ದಾಖಲಾಗಿವೆ. ಕಳೆದೊಂದು ವಾರದಲ್ಲಿ ಒಂದು ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.