ಸುಯೆಜ್ (ಈಜಿಪ್ಟ್): ಸುಯೆಜ್ ಕಾಲುವೆಯಲ್ಲಿ ಕಳೆದ ಒಂದು ವಾರದಿಂದ ಸಿಲುಕಿದ್ದ ಎವರ್ ಗಿವನ್ ಬೃಹತ್ ಹಡಗನ್ನು ಸೋಮವಾರ ಮುಕ್ತಗೊಳಿಸಲಾಯಿತು.
10 ಶಕ್ತಿಶಾಲಿ ನಾವೆಗಳನ್ನು ಬಳಸಿಕೊಂಡು ಹಡಗನ್ನು ಹಿಂದು–ಮುಂದು ಚಲಿಸುವಂತೆ ಮಾಡಲಾಯಿತು. ಹುಣ್ಣಿಮೆಯ ದಿನವಾದ್ದರಿಂದ ಉಬ್ಬರ ಹೆಚ್ಚಾಗಿತ್ತು.ಇದೂ ಸಹ ಹಡಗನ್ನು ಆ ಜಾಗದಿಂದ ತೆರವುಗೊಳಿಸಲು ನೆರವಾಯಿತು ಎಂದು ಮೂಲಗಳು ಹೇಳಿವೆ.
ಹಡಗನ್ನು ಮುಕ್ತಗೊಳಿಸುವ ಪ್ರಯತ್ನದಲ್ಲಿನ ಯಶಸ್ಸನ್ನು ನಾವೆಗಳ ಸಿಬ್ಬಂದಿ ಸಂಭ್ರಮಿಸುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
2,20,000 ಟನ್‌ನಷ್ಟು ಸರಕು ಹೊತ್ತಿದ್ದ ಈ ಹಡಗು ಸುಯೆಜ್ ಕಾಲುವೆಯಲ್ಲಿ ಸಿಲುಕಿದ ಪರಿಣಾಮ ಅಂತರರಾಷ್ಟ್ರೀಯ ವ್ಯಾಪಾರಕ್ಕೆ ತೀವ್ರ ಹಿನ್ನಡೆ ಉಂಟಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.