ವಾಷಿಂಗ್ಟನ್: ಜಗತ್ತಿನಲ್ಲಿ ವರ್ಷದಿಂದ ವರ್ಷಕ್ಕೆ ಬಂದೂಕುಗಳ ಸಂಖ್ಯೆ ಏರುತ್ತಲೇ ಇದೆ. ಒಂದು ದಶಕದಿಂದ ಈಚೆಗೆ ಬಂದೂಕು ಹೊಂದುವುದು ಜಗತ್ತಿನಾದ್ಯಂತ ಶೇ 15.7ರಷ್ಟು ಏರಿಕೆಯಾಗಿದೆ. ‘ಸ್ಮಾಲ್ ಆರ್ಮ್ಸ್ ಸರ್ವೆ’ ಬಿಡುಗಡೆ ಮಾಡಿರುವ 2018ರ ಸಮೀಕ್ಷೆ ವರದಿಯೂ ಇದನ್ನು ದೃಢಪಡಿಸುತ್ತಿದೆ.
ಸೇನಾ ಪಡೆಗಳು, ಕಾನೂನು ಜಾರಿ ಸಂಸ್ಥೆಗಳ ಬಳಿಯಲ್ಲಿ ಇರುವ ಬಂದೂಕುಗಳ ಸಂಖ್ಯೆಗಿಂತ ಜನರ ಬಳಿ ಇರುವ ಬಂದೂಕುಗಳ ಸಂಖ್ಯೆಯೇ ಹೆಚ್ಚು. ಒಂದು ದಶಕದಲ್ಲಿ ನಾಗರಿಕರ ಬಳಿ ಬಂದೂಕು ಪ್ರಮಾಣ ಶೇ 32ರಷ್ಟು ಏರಿಕೆಯಾಗಿದೆ. ಯಾವ ಯಾವ ರಾಷ್ಟ್ರಗಳು ಎಷ್ಟೆಷ್ಟು ಬಂದೂಕು ಪಾಲು ಹೊಂದಿವೆ ಎನ್ನುವುದರತ್ತ ‘ಸ್ಮಾಲ್ ಆರ್ಮ್ಸ್ ಸರ್ವೆ’ ಜಾಗತಿಕ ಅಧ್ಯಯನ ಕೇಂದ್ರ ಬೆಳಕು ಚೆಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.