ADVERTISEMENT

ಗರ್ಭಪಾತ ಚಿಕಿತ್ಸಾಲಯಕ್ಕೆ ಭೇಟಿ ನೀಡಿದ ಲೊಕೇಷನ್ ಹಿಸ್ಟರಿ ಅಳಿಸಲಾಗುವುದು: ಗೂಗಲ್

ಏಜೆನ್ಸೀಸ್
Published 2 ಜುಲೈ 2022, 7:44 IST
Last Updated 2 ಜುಲೈ 2022, 7:44 IST
   

ವಾಷಿಂಗ್ಟನ್‌: ಅಮೆರಿಕದಲ್ಲಿ ಜನರು ಗರ್ಭಪಾತ ಚಿಕಿತ್ಸಾಲಯಗಳು, ಕೌಟುಂಬಿಕ ಹಿಂಸಾಚಾರದ ಆಶ್ರಯ ಸ್ಥಳಗಳಿಗೆ ಭೇಟಿ ನೀಡಿದ ಲೊಕೇಷನ್‌ (ಸ್ಥಳದ) ಹಿಸ್ಟರಿಯನ್ನು ಅಳಿಸುವುದಾಗಿ ಗೂಗಲ್‌ ಶುಕ್ರವಾರ ಪ್ರಕಟಿಸಿದೆ.

ಜನರಆರೋಗ್ಯದ ವಿಚಾರದಲ್ಲಿ ಗೋಪ್ಯತೆ ಕಾಪಾಡುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದುಗೂಗಲ್‌ನ ಹಿರಿಯ ಉಪಾಧ್ಯಕ್ಷೆ ಜೆನ್ ಫಿಟ್ಜ್‌ಪ್ಯಾಟ್ರಿಕ್ ಅವರುಬ್ಲಾಗ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. 'ಈ (ಗೋಪ್ಯತೆ ಬಯಸುವ) ಸ್ಥಳಗಳಿಗೆ ಯಾರಾದರು ಭೇಟಿ ನೀಡಿದ್ದಾರೆ ಎಂದು ನಮ್ಮ ಸಿಸ್ಟಂ ಗುರುತಿಸಿದರೆ, ಅಂತಹ ಸ್ಥಳಗಳ ವಿವರವನ್ನು ಹಿಸ್ಟರಿಯಿಂದ ಅಳಿಸುತ್ತೇವೆ. ಈ ಕ್ರಮವು ಮುಂದಿನ ವಾರಗಳಲ್ಲಿ ಚಾಲ್ತಿಗೆ ಬರಲಿದೆ' ಎಂದು ತಿಳಿಸಿದ್ದಾರೆ.

ಫರ್ಟಿಲಿಟಿ ಸೆಂಟರ್‌ಗಳು, ಚಟ ಬಿಡಿಸುವ ಕೇಂದ್ರಗಳು ಮತ್ತು ತೂಕ ಇಳಿಸಿಕೊಳ್ಳುವ ಚಿಕಿತ್ಸಾ ಕೇಂದ್ರಗಳಿಗೆ ಭೇಟಿ ನೀಡಿದ ಡೇಟಾಗಳನ್ನು ಸಹ ಗೂಗಲ್‌ ಸಂಗ್ರಹಿಸುವುದಿಲ್ಲ ಎಂದೂ ಹೇಳಲಾಗಿದೆ.

ADVERTISEMENT

ಗೂಗಲ್‌ ಬಳಕೆದಾರರ ಡೇಟಾ ಗೋಪ್ಯತೆಯ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಿದೆ ಎಂದು ಫಿಟ್ಜ್‌ಪ್ಯಾಟ್ರಿಕ್ ಒತ್ತಿಹೇಳಿದ್ದಾರೆ.

ಅಮೆರಿಕದಲ್ಲಿ ಕಳೆದ 50 ವರ್ಷಗಳಿಂದ ಜಾರಿಯಲ್ಲಿದ್ದ, ಮಹಿಳೆಯರ ಗರ್ಭಪಾತದ ಸಾಂವಿಧಾನಿಕ ಹಕ್ಕನ್ನು ಅಲ್ಲಿನ ಸುಪ್ರೀಂ ಕೋರ್ಟ್‌ ಜೂನ್‌ 24ರಂದು ರದ್ದುಗೊಳಿಸಿದೆ. ಅದನ್ನು ವಿರೋಧಿಸಿ ಅಮೆರಿಕದ ಹಲವು ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.ಅಧ್ಯಕ್ಷ ಜೋ ಬೈಡನ್ ಅವರೂ ಸುಪ್ರೀಂ ಕೋರ್ಟ್‌ನಿಂದ ರದ್ದಾಗಿರುವ ಗರ್ಭಪಾತದ ಸಾಂವಿಧಾನಿಕ ಹಕ್ಕನ್ನು ರಕ್ಷಿಸಲು ಯತ್ನಿಸುವುದಾಗಿ ಹೇಳಿದ್ದಾರೆ.ಇದರ ನಡುವೆ ಗೂಗಲ್‌ ಈ ಕ್ರಮ ಕೈಗೊಳ್ಳುವುದಾಗಿ ಪ್ರಕಟಿಸಿದೆ.

ಗ್ರಾಹಕರಿಂದ ಸಂಗ್ರಹಿಸುವ ಮಾಹಿತಿಯನ್ನು ಮಿತಿಗೊಳಿಸಬೇಕು. ಅವು ಗರ್ಭಪಾತಕ್ಕೆ ಸಂಬಂಧಿಸಿದ ತನಿಖೆಗಳು ಮತ್ತು ಕಾನೂನು ಕ್ರಮಗಳಿಗೆ ಬಳಕೆಯಾಗಬಾರದು ಎಂದುಹೋರಾಟಗಾರರು ಹಾಗೂ ರಾಜಕಾರಣಿಗಳು ಗೂಗಲ್‌ ಮತ್ತು ತಂತ್ರಜ್ಞಾನ ಕ್ಷೇತ್ರದ ಇತರ ದೈತ್ಯ ಕಂಪೆನಿಗಳನ್ನು ಒತ್ತಾಯಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.