ADVERTISEMENT

ಭಾರತಕ್ಕೆ ಸಹಕಾರ: ರಾಜಪಕ್ಸೆ

ಪಿಟಿಐ
Published 25 ನವೆಂಬರ್ 2019, 20:02 IST
Last Updated 25 ನವೆಂಬರ್ 2019, 20:02 IST
ಗೋಟಬಯಾ ರಾಜಪಕ್ಸೆ
ಗೋಟಬಯಾ ರಾಜಪಕ್ಸೆ   

ಕೊಲಂಬೊ:ಭಾರತದ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುವುದಿಲ್ಲ ಎಂದುಶ್ರೀಲಂಕಾ ಅಧ್ಯಕ್ಷ ಗೋಟಬಯಾ ರಾಜಪಕ್ಸೆ ಹೇಳಿದ್ದಾರೆ.

ನ.29ರಿಂದ ಭಾರತಕ್ಕೆ ಅವರು ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ಮಹತ್ವ ಪಡೆದಿದೆ.

ಚೀನಾ ಪರ ಒಲವನ್ನು ಅಲ್ಲಗಳೆದಿರುವ ಅವರು,ಶ್ರೀಲಂಕಾತಟಸ್ಥ ದೇಶವಾಗಿ ಉಳಿಯಲಿದ್ದು, ಎಲ್ಲ ದೇಶ
ಗಳನ್ನು ಸಮಾನವಾಗಿ ನೋಡಲಿದೆ ಎಂದು ದೃಢಪಡಿಸಿದ್ದಾರೆ.

ADVERTISEMENT

‘ಭಾರತವು ಸಹೋದರ ದೇಶವಾಗಿದ್ದು, ಹಿತಾಸಕ್ತಿಗೆ ಭಂಗ ತರುವುದಿಲ್ಲ. ಅದರ ಧ್ಯೇಯೋದ್ದೇಶಗಳಿಗೆ ಪೂರಕವಾಗಿ ಸ್ಪಂದಿಸಲಿದೆ. ಎರಡು ಪ್ರಬಲ ದೇಶಗಳ ನಡುವೆ ನಾವು ಇರಬಯಸುವುದಿಲ್ಲ. ನಮ್ಮದು ಸಣ್ಣ ರಾಷ್ಟ್ರ. ಪ್ರಬಲ ಶಕ್ತಿಗಳ ನಡುವೆ ಸಮತೋಲಿತ ಸಂಬಂಧಗಳನ್ನು ಹೊಂದದೇ ಹೋದರೆ ದೇಶದ ಹಿತಾಸಕ್ತಿಗೆ ಮಾರಕವಾಗುತ್ತದೆ’ ಎಂದು ‘ಭಾರತ್‌ ಶಕ್ತಿ’ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.

ಸಾಮರಸ್ಯದಿಂದ ಕೆಲಸ: ಭಾರತದ ಭದ್ರತೆಗೆ ಧಕ್ಕೆ ತರುವ ಯಾವುದೇ ಚಟುವಟಿಕೆಯಲ್ಲೂ ತೊಡಗುವುದಿಲ್ಲ. ಹಿಂದೂ ಮಹಾಸಾಗರದ ಆಯಕಟ್ಟಿನ ಸ್ಥಳದಲ್ಲಿ ಶ್ರೀಲಂಕಾ ಇದ್ದು, ಜಾಗತಿಕ ರಾಜಕಾರಣದಲ್ಲಿ ಪ್ರಭಾವವನ್ನು ಹೊಂದಿದೆ.ಚೀನಾ ಮತ್ತು ಭಾರತದ ಜತೆ ಸಾಮರಸ್ಯದಿಂದ ಕೆಲಸ ಮಾಡಲಿದೆ ಎಂದು ಅವರು ಹೇಳಿದ್ದಾರೆ.

ಪೊಲೀಸ್‌ ಅಧಿಕಾರಿ ವಿದೇಶಕ್ಕೆ ಪರಾರಿ

ಶ್ರೀಲಂಕಾ ಪ್ರಮುಖ ಪೊಲೀಸ್ ಅಧಿಕಾರಿಇನ್‌ಸ್ಪೆಕ್ಟರ್‌ ನಿಶಾಂತ ಸಿಲ್ವ ದೇಶ ಬಿಟ್ಟು ಜಿನೀವಾಗೆ ಪರಾರಿಯಾಗಿದ್ದಾರೆ.

ಅವರು2015– 2015ರಲ್ಲಿ ಮಹಿಂದಾ ರಾಜಪಕ್ಸೆ ಸಂಪುಟದಲ್ಲಿದ್ದ ಹಲವು ಸದಸ್ಯರ ವಿರುದ್ಧ ತನಿಖೆಯನ್ನು ಕೈಗೊಂಡಿದ್ದರು. ರಾಜಪಕ್ಸೆ ಕುಟುಂಬ ಮತ್ತೆ ದೇಶದ ಚುಕ್ಕಾಣಿ ಹಿಡಿದಿರುವ ಹಿನ್ನೆಲೆಯಲ್ಲಿ ಭಾನುವಾರ ದೇಶ ಬಿಟ್ಟು ತೆರಳಿದ್ದಾರೆ. ಇದಕ್ಕೆ ಯಾವುದೇ ಅನುಮತಿಯನ್ನುಅವರು ಪಡೆದಿಲ್ಲ.

ಭ್ರಷ್ಟಾಚಾರ ‍ಪ್ರಕರಣಗಳಿಗೆ ಸಂಬಂಧಿಸಿದಂತೆ 2015ರಿಂದ ಸಿಲ್ವ ಅವರು ತನಿಖೆ ನಡೆಸಿದ್ದರು. ಪೂರ್ವಗ್ರಹಿಗಳಾಗಿ ಈ ತನಿಖೆ ಕೈಗೊಂಡಿದ್ದರು ಎಂಬ ಆಪಾದನೆಯು ಅವರ ಮೇಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.