ADVERTISEMENT

ಗೊಟಬಯ ರಾಜಪಕ್ಸ ಶ್ರೀಲಂಕಾ ಅಧ್ಯಕ್ಷ

ಏಜೆನ್ಸೀಸ್
Published 17 ನವೆಂಬರ್ 2019, 5:36 IST
Last Updated 17 ನವೆಂಬರ್ 2019, 5:36 IST
   

ಕೊಲಂಬೊ: ಶ್ರೀಲಂಕಾದ ಮಾಜಿ ರಕ್ಷಣಾ ಕಾರ್ಯದರ್ಶಿ ಗೊಟಬಯ ರಾಜಪಕ್ಸಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

269 ಮಂದಿಯನ್ನು ಬಲಿತೆಗೆದುಕೊಂಡ ಭೀಕರ ಭಯೋತ್ಪಾದನಾ ದಾಳಿ ನಡೆದು ಏಳು ತಿಂಗಳ ಬಳಿಕ ಇಲ್ಲಿ ಅಧ್ಯಕ್ಷೀಯ ಚುನಾವಣೆ ನಡೆದಿದೆ.

70ರ ಹರೆಯ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಆಗಿರುವ ರಾಜಪಕ್ಸಶೇ. 48. 2ರಷ್ಟು ಮತಗಳನ್ನು ಗಳಿಸಿ ವಿಜಯಿಯಾಗಿದ್ದಾರೆ. ಇದು ಸ್ಪಷ್ಟ ಬಹುಮತ. ಇದನ್ನು ನಾವು ಎದುರು ನೋಡುತ್ತಿದ್ದೆವು. ಗೊಟಬಯ ಅವರು ನಮ್ಮ ಮುಂದಿನ ಅಧ್ಯಕ್ಷರು ಎಂದು ಖುಷಿಯಾಗುತ್ತಿದೆ. ಅವರು ನಾಳೆ ಅಥವಾ ನಾಡಿದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಗೊಟಬಯ ಅವರ ವಕ್ತಾರ ಕೆಹೆಲಿಯಾ ರಂಬುಕ್‌ವೆಲ್ಲಾ ಹೇಳಿರುವುದಾಗಿ ಎಎಫ್‌ಪಿ ವರದಿ ಮಾಡಿದೆ.

ADVERTISEMENT

ರಾಜಪಕ್ಸವಿರುದ್ಧ ಸ್ಪರ್ಧಿಸಿದ್ದ ವಸತಿ ಸಚಿವ ಸಜಿತ್ ಪ್ರೇಮದಾಸ ಶೇ.45.3 ಮತ ಗಳಿಸಿದ್ದಾರೆ.
ನವೆಂಬರ್ 16ರಂದುನಡೆದ ಚುನಾವಣೆಯಲ್ಲಿ15.99 ದಶಲಕ್ಷ ಮತದಾರರ ಪೈಕಿ ಶೇ.80ರಷ್ಟು ಮತದಾರರು ಮತಚಲಾವಣೆ ಮಾಡಿದ್ದರು ಎಂದು ಚುನಾವಣಾ ಆಯೋಗದ ಅಧ್ಯಕ್ಷ ಮಹೀಂದ್ರ ದೇಶಪ್ರಿಯ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.