ಅಥೆನ್ಸ್: ದಕ್ಷಿಣ ಗ್ರೀಸ್ ಕರಾವಳಿಯಲ್ಲಿ ವಲಸಿಗರನ್ನು ಕರೆದೊಯ್ಯುತ್ತಿದ್ದ ಮೀನುಗಾರಿಕಾ ದೋಣಿ ಮಗುಚಿ ಮುಳುಗಿದ ಪರಿಣಾಮ 59 ಜನರು ಮೃತಪಟ್ಟಿದ್ದಾರೆ. ಹಲವು ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಈವರೆಗೆ 104 ಜನರನ್ನು ರಕ್ಷಿಸಲಾಗಿದೆ. ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 59 ಶವಗಳು ಪತ್ತೆಯಾಗಿವೆ. ಎಷ್ಟು ಪ್ರಯಾಣಿಕರು ಕಾಣೆಯಾಗಿರಬಹುದು ಎಂಬುದು ಅಸ್ಪಷ್ಟವಾಗಿದೆ ಎಂದು ಗ್ರೀಕ್ ಕೋಸ್ಟ್ ಗಾರ್ಡ್ ತಿಳಿಸಿದೆ.
ಆರು ಕೋಸ್ಟ್ ಗಾರ್ಡ್ ಹಡಗುಗಳು, ಮಿಲಿಟರಿ ಸಾರಿಗೆ ವಿಮಾನ, ವಾಯುಪಡೆಯ ಹೆಲಿಕಾಪ್ಟರ್, ಹಲವಾರು ಖಾಸಗಿ ಹಡಗುಗಳು ಶೋಧದಲ್ಲಿ ಪಾಲ್ಗೊಂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.