ADVERTISEMENT

ಒಲಿಂಪಿಕ್‌ನ ಪುರಾತನ ಸಂಪ್ರದಾಯಕ್ಕೂ ಕೋವಿಡ್‌ ಕಂಟಕ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 14:11 IST
Last Updated 13 ಮಾರ್ಚ್ 2020, 14:11 IST
   

ಅಥೆನ್ಸ್‌ (ಎಎಫ್‌ಪಿ): ಟೋಕಿಯೊ ಒಲಿಂಪಿಕ್ಸ್‌ನ ‘ಜ್ಯೋತಿ ಯಾತ್ರೆ’ಯನ್ನು ಗ್ರೀಸ್‌ ಒಲಿಂಪಿಕ್‌ ಸಮಿತಿ ಶುಕ್ರವಾರ ರದ್ದುಮಾಡಿದೆ. ಕೊರೊನಾ ಸೋಂಕು ಭೀತಿಯಿದ್ದರೂ ಜನರು ‘ರಿಲೇ’ ಓಟಕ್ಕೆ ಸೇರುತ್ತಿದ್ದ ಕಾರಣ ಈ ನಿರ್ಧಾರ ಕೈಗೊಂಡಿದೆ.

ನಿಗದಿಯಂತೆ ಮಾರ್ಚ್‌ 19ರಂದು ಟೋಕಿಯೊ ಒಲಿಂಪಿಕ್‌ ಸಂಘಟಕರಿಗೆ ಜ್ಯೋತಿ ಹಸ್ತಾಂತರಿಸಲಾಗುವುದು. ಈ ಸಂದರ್ಭದಲ್ಲೂ ಪ್ರೇಕ್ಷಕರನ್ನು ನಿರ್ಬಂಧಿಸಲಾಗಿದೆ ಎಂದು ಸಮಿತಿ ಹೇಳಿದೆ.

ಗ್ರೀಸ್‌ನಲ್ಲಿ 117 ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಒಬ್ಬರು 10 ದಿನಗಳ ನಂತರ ಕೋವಿಡ್‌ –19 ನಿಂದ ಮೃತಪಟ್ಟಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.