ಪ್ಯಾರಿಸ್: ಖ್ಯಾತ ಡಚ್ ಚಿತ್ರ ಕಲಾವಿದ ವ್ಯಾನ್ ಗೋ ಆತ್ಮಹತ್ಯೆ ಮಾಡಿಕೊಳ್ಳಲು ಬಳಸಿದ್ದು ಎನ್ನಲಾದ ರಿವಾಲ್ವರ್ ಅನ್ನು ಪ್ಯಾರಿಸ್‌ನ ಹರಾಜು ಸಂಸ್ಥೆ ಬುಧವಾರ ಹರಾಜಿಗಿಟ್ಟಿದೆ.
ಕಲಾ ಲೋಕದ ಇತಿಹಾಸದಲ್ಲಿ ಪ್ರಸಿದ್ಧವಾದ ರಿವಾಲ್ವರ್ ಎಂದೇ ಗುರುತಿಸಲಾಗಿರುವ 7 ಎಂ.ಎಂನ ಲೆಫಾಚೊ ರಿವಾಲ್ವರ್ ₹46.71 ಲಕ್ಷಕ್ಕೆ ಖರೀದಿಯಾಗುವ ನಿರೀಕ್ಷೆ ಇದೆ.
ಪ್ಯಾರಿಸ್‌ನ ಉತ್ತರದಲ್ಲಿರುವ ಹಳ್ಳಿಯೊಂದರ ಹೊಲದಲ್ಲಿ1890ರಲ್ಲಿ ವ್ಯಾನ್ ಗೋ,ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಮೃತಪಟ್ಟ. ಹಳ್ಳಿಯ ವಸತಿ ನಿಲಯದ ಮಾಲೀಕನಿಂದ ವ್ಯಾನ್ ಗೋ ಈ ರಿವಾಲ್ವರ್ ಪಡೆದುಕೊಂಡಿದ್ದ.
‘1965ರಲ್ಲಿ ರೈತನೊಬ್ಬ ಈ ರಿವಾಲ್ವರ್ ಪತ್ತೆ ಮಾಡಿದ್ದ. ನಂತರ ಆತ ಅದನ್ನು ಅದರ ಮಾಲೀಕರಿಗೆ ನೀಡಿದ್ದ. ಬಳಿಕ ಇದನ್ನು ಆ್ಯಮ್‌ಸ್ಟರ್‌ಡ್ಯಾಮ್‌ನಲ್ಲಿರುವ ವ್ಯಾನ್ ಗೋ ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇರಿಸಲಾಗಿತ್ತು’ ಎಂದು ಹರಾಜು ಸಂಸ್ಥೆ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.