ADVERTISEMENT

ಪ್ರೇಗ್‌ ವಿ.ವಿಯಲ್ಲಿ ಗುಂಡಿನ ದಾಳಿ: 10 ಮಂದಿ ಸಾವು, ಹಲವರಿಗೆ ಗಾಯ

ರಾಯಿಟರ್ಸ್
Published 21 ಡಿಸೆಂಬರ್ 2023, 23:30 IST
Last Updated 21 ಡಿಸೆಂಬರ್ 2023, 23:30 IST
<div class="paragraphs"><p>ಗುಂಡಿನ ದಾಳಿ</p></div>

ಗುಂಡಿನ ದಾಳಿ

   

–ಪ್ರಾತಿನಿಧಿಕ ಚಿತ್ರ

ಪ್ರೇಗ್: ಪ್ರೇಗ್‌ನ ಚಾರ್ಲ್ಸ್‌ ವಿಶ್ವವಿದ್ಯಾಲಯದಲ್ಲಿ ಬಂದೂಕುಧಾರಿಯೊಬ್ಬ ಗುರುವಾರ ನಡೆಸಿದ ಗುಂಡಿನ ದಾಳಿಯಲ್ಲಿ ಹತ್ತು ಮಂದಿ ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ.

ADVERTISEMENT

ಬಂದೂಕುಧಾರಿಯನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜನ್ ಪಲಾಚ್ ಚೌಕದಲ್ಲಿರುವ ಚಾರ್ಲ್ಸ್ ವಿಶ್ವವಿದ್ಯಾಲಯದಲ್ಲಿ ಈ ಗುಂಡಿನ ದಾಳಿ ನಡೆದಿದೆ ಎಂದು ಜೆಕ್ ಪೊಲೀಸರು ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ.

‘ಬಂದೂಕುಧಾರಿ ಕಟ್ಟಡದಲ್ಲೇ ಇದ್ದಾನೆ. ಯಾರು ಕೂಡ ತಮ್ಮ ಕೊಠಡಿಯಿಂದ ಹೊರಬರಬೇಡಿ’ ಎಂಬ ಇ–ಮೇಲ್‌ ಸಂದೇಶ ಚಾರ್ಲ್ಸ್‌ ವಿಶ್ವವಿದ್ಯಾಲಯದ ಕಲಾ ವಿಭಾಗದ ಬೋಧಕ ಸಿಬ್ಬಂದಿಗೆ ರವಾನೆಯಾಗಿತ್ತು.

‘ಎಲ್ಲಿಯೂ ಹೋಗಬೇಡಿ, ನೀವು ಕಚೇರಿಗಳಲ್ಲಿದ್ದರೆ, ಅವುಗಳನ್ನು ಲಾಕ್ ಮಾಡಿಕೊಳ್ಳಿ. ಬಾಗಿಲಿನ ಮುಂದೆ ಪೀಠೋಪಕರಣಗಳನ್ನು ಅಡ್ಡ ಇರಿಸಿ, ಲೈಟ್‌ಗಳನ್ನು ಆಫ್ ಮಾಡಿ’ ಎಂದೂ ಇ–ಮೇಲ್‌ನಲ್ಲಿ ಮನವಿ ಮಾಡಲಾಗಿತ್ತು. 

‘‌ಸದ್ಯ ನಾನು ನೋಡಿರುವ ಪ್ರಕಾರ, ಬಂದೂಕುಧಾರಿ ಸೇರಿ 11 ಮಂದಿ ಸತ್ತಿದ್ದಾರೆ’ ಎಂದು ಪ್ರೇಗ್‌ನ ತುರ್ತು ಸೇವೆಗಳ  ವಕ್ತಾರೆ ಜನಾ ಪೋಸ್ಟೋವಾ ಪಬ್ಲಿಕ್‌ ಜೆಕ್ ಟಿವಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.