ADVERTISEMENT

ಇರಾನ್: ಮಸೀದಿಯಲ್ಲಿ 15 ಮಂದಿ ಕೊಂದಿದ್ದ ಬಂದೂಕುಧಾರಿ ಸಾವು

ಏಜೆನ್ಸೀಸ್
Published 29 ಅಕ್ಟೋಬರ್ 2022, 13:37 IST
Last Updated 29 ಅಕ್ಟೋಬರ್ 2022, 13:37 IST
ಶಾ ಚೆರಾಗ್‌ ಮಸೀದಿಯಲ್ಲಿ ಮೃತಪಟ್ಟವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಜನರು –ಎಎಫ್‌ಪಿ ಚಿತ್ರ
ಶಾ ಚೆರಾಗ್‌ ಮಸೀದಿಯಲ್ಲಿ ಮೃತಪಟ್ಟವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಜನರು –ಎಎಫ್‌ಪಿ ಚಿತ್ರ   

ದುಬೈ (ಎಪಿ): ದಕ್ಷಿಣ ಇರಾನ್‌ನಲ್ಲಿರುವ ಶಿಯಾಗಳ ಪವಿತ್ರಮಸೀದಿಶಾ ಚೆರಾಗ್‌ನಲ್ಲಿಬುಧವಾರ 15 ಮಂದಿಯನ್ನು ಕೊಂದಿದ್ದ ಬಂದೂಕುಧಾರಿಯೊಬ್ಬ ಮೃತಪಟ್ಟಿದ್ದಾನೆ ಎಂದು ಇರಾನ್‌ನ ಮಾಧ್ಯಮ ಸಂಸ್ಥೆ ಶನಿವಾರ ಹೇಳಿದೆ.

‘ಸಾವಿಗೀಡಾದ ವ್ಯಕ್ತಿಯ ಬಗೆಗಿನ ಮಾಹಿತಿಯನ್ನು ಅಧಿಕಾರಿಗಳು ಬಿಟ್ಟುಕೊಟ್ಟಿಲ್ಲ. ತನ್ನ ಬಂಧನದ ಸಮಯದಲ್ಲಿ ಗಾಯಗಳು ಉಂಟಾಗಿದ್ದರಿಂದ ಮೃತ ವ್ಯಕ್ತಿಯು ಶಿರಾಜ್‌ನ ದಕ್ಷಿಣ ಪ್ರಾಂತ್ಯದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ’ ಎಂದು ಇರಾನ್‌ನ ಅರೆಕಾಲಿಕ ಸುದ್ದಿ ಸಂಸ್ಥೆ ಫಾರ್ಸ್‌ ಹಾಗೂ ತಸ್ನಿಮ್‌ ಸುದ್ದಿ ಸಂಸ್ಥೆ ತಿಳಿಸಿವೆ.

ಬುಧವಾರ ಶಾ ಚೆರಾಗ್‌ನಲ್ಲಿ ನಡೆದಿದ್ದ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ಉಗ್ರ ಸಂಘಟನೆ ವಹಿಸಿಕೊಂಡಿತ್ತು. ಇರಾನ್‌ ಸರ್ಕಾರವು ಯಾವುದೇ ಸಾಕ್ಷ್ಯ ನೀಡದೆ, ದೇಶದಾದ್ಯಂತ ನಡೆಯುತ್ತಿರುವ ಶಾಂತಿಯುತ ಪ್ರತಿಭಟನೆಗಳ ಮೇಲೆ ಈ ದಾಳಿಯ ಆರೋಪವನ್ನು ಹೊರಿಸಲು ಪ್ರಯತ್ನಿಸಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.