ADVERTISEMENT

ಮೆಕ್ಸಿಕೋ: ಪೊಲೀಸ್ ವಾಹನದ ಮೇಲೆ ಗುಂಡಿನ ದಾಳಿ, 13 ಅಧಿಕಾರಿಗಳ ಹತ್ಯೆ

ಪಿಟಿಐ
Published 19 ಮಾರ್ಚ್ 2021, 5:01 IST
Last Updated 19 ಮಾರ್ಚ್ 2021, 5:01 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮೆಕ್ಸಿಕೋ: ಪೊಲೀಸ್ ಬೆಂಗಾವಲು ವಾಹನದ ಮೇಲೆ ಗುಂಡಿನ ದಾಳಿ ನಡೆಸಿರುವ ಡ್ರಗ್ ಗ್ಯಾಂಗ್ 8 ಪೊಲೀಸರು ಮತ್ತು 3 ಪ್ರಾಸಿಕ್ಯೂಶನ್ ಅಧಿಕಾರಿಗಳನ್ನು ಹತ್ಯೆ ಮಾಡಿದೆ.

ಇದು 2019ರಿಂದೀಚೆಗೆ ಮೆಕ್ಸಿಕೋದಲ್ಲಿ ನಡೆದ ಅತಿ ದೊಡ್ಡ ಅಧಿಕಾರಿಗಳ ಹತ್ಯಾಕಾಂಡವಾಗಿದೆ. ಅಕ್ಟೋಬರ್, 2019ರಲ್ಲಿ ನೆರೆಯ ಮೈಕೋವಕಾನ್‌ನಲ್ಲಿ ಬಂದೂಕುಧಾರಿಗಳು ಹೊಂಚು ಹಾಕಿ 14 ಪೊಲೀಸರನ್ನು ಕೊಂದಿದ್ದರು.

ಕಾನೂನು ಅಧಿಕಾರಿಗಳ ಹತ್ಯೆ ಬಳಿಕ ಮೆಕ್ಸಿಕೊ ನಗರದ ನೈರುತ್ಯ ದಿಕ್ಕಿನಲ್ಲಿರುವ ಗ್ರಾಮೀಣ, ಮಾದಕ ವ್ಯಸನಿಗಳಿರುವ ಪ್ರದೇಶಗಳಲ್ಲಿ ಕೊಲೆಗಡುಕರಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ.

ADVERTISEMENT

ಸೈನಿಕರು, ನೌಕಾಪಡೆಯವರು ಮತ್ತು ರಾಷ್ಟ್ರೀಯ ಗಾರ್ಡ್ ಪಡೆಗಳು ಈ ಪ್ರದೇಶದಲ್ಲಿ ಭೂ ಮತ್ತು ವಿಮಾನಗಳ ಮೂಲಕ ಕೊಲೆಗಾರರಾಗಿ ಶೋಧ ನಡೆಸುತ್ತಿವೆ ಎಂದು ರಾಜ್ಯ ಸಾರ್ವಜನಿಕ ಸುರಕ್ಷತಾ ವಿಭಾಗದ ಮುಖ್ಯಸ್ಥ ರೊಡ್ರಿಗೋ ಮಾರ್ಟಿನೆಜ್ ಸೆಲಿಸ್ ಹೇಳಿದ್ದಾರೆ.

"ಈ ಪ್ರದೇಶದಲ್ಲಿ ಕ್ರಿಮಿನಲ್ಸ್ ಗುಂಪುಗಳ ವಿರುದ್ಧ ಕ್ರಮ ಜರುಗಿಸಲು ಪೊಲೀಸ್ ವಾಹನವು ಗಸ್ತು ತಿರುಗುತ್ತಿತ್ತು. ಈ ವೇಳೆ ಬಂದೂಕುದಾರಿಗಳಿಂದ ದಾಳಿ ನಡೆದಿದೆ" ಎಂದು ಮಾರ್ಟಿನೆಜ್ ಸೆಲಿಸ್ ಹೇಳಿದರು. ಈ ಆಕ್ರಮಣವು ಮೆಕ್ಸಿಕನ್ ಸರ್ಕಾರದ ಮೇಲಿನ ಆಕ್ರಮಣವಾಗಿದೆ. ನಮ್ಮೆಲ್ಲ ಶಕ್ತಿ ಒಟ್ಟುಗೂಡಿಸಿ ಮರು ದಾಳಿ ನಡೆಸುವುದಾಗಿ ಅವರು ತಿಳಿಸಿದ್ದಾರೆ..

ಬಂದೂಕುಧಾರಿಗಳು ಯಾವ ಗ್ಯಾಂಗ್ ಅಥವಾ ಕಾರ್ಟೆಲ್ಗೆ ಸೇರಿದವರಾಗಿರಬಹುದು ಎಂಬುದರ ಬಗ್ಗೆ ತಕ್ಷಣಕ್ಕೆ ಮಾಹಿತಿ ಸಿಕ್ಕಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.