ಲಾಗೋಸ್: ನೈಜೀರಿಯಾದಲ್ಲಿ ಬಂದೂಕುಧಾರಿ ವ್ಯಕ್ತಿಯೊಬ್ಬ ನಿವಾಸಿಗಳ ಮೇಲೆ ಗುಂಡು ಹಾರಿಸಿ, ಮನೆಗಳಿಗೆ ಬೆಂಕಿ ಇಟ್ಟು ಸುಮಾರು 40 ಮಂದಿಯನ್ನು ಹತ್ಯೆ ಮಾಡಿದ್ದಾನೆ ಎಂದು ಸ್ಥಳೀಯ ಸರ್ಕಾರ ಮಂಗಳವಾರ ತಿಳಿಸಿದೆ.
ಸಂಪನ್ಮೂಲಗಳು ಮತ್ತು ಅಂತರಕೋಮು ವಿಷಯವಾಗಿ ವೇಸ್ ಜಿಲ್ಲೆಯು ಸುದೀರ್ಘ ಕಾಲದಿಂದ ಸಂಘರ್ಷದ ಕೇಂದ್ರವಾಗಿತ್ತು. ಇಲ್ಲಿ ಸೋಮವಾರ ಮತ್ತೆ ಹಿಂಸಾಚಾರ ನಡೆದಿದೆ.
ಝುರಕ್ ಸಮುದಾಯದ ಬಂದೂಕುದಾರಿ ವ್ಯಕ್ತಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ ಮತ್ತು ಮನೆಗಳಿಗೆ ಬೆಂಕಿ ಇಟ್ಟಿದ್ದಾನೆ. ಇದರಿಂದಾಗಿ ಈವರೆಗೆ 40 ಮಂದಿ ಮೃತಪಟ್ಟಿರುವ ವರದಿ ಲಭ್ಯವಾಗಿದೆ ಎಂದು ಪ್ಲಟೆಯು ರಾಜ್ಯದ ಮಾಹಿತಿ ಇಲಾಖೆಯ ಆಯುಕ್ತ ಮುಸಾ ಇಬ್ರಾಹಿಂ ಅಶೋಮ್ಸ್ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.