ಟೆಹ್ರಾನ್: ಸುಳ್ಳು ಸಂದೇಶಗಳನ್ನು ರವಾನಿಸುವ ಮೂಲಕ ಇರಾನ್‌ನಲ್ಲಿ ರೈಲು ಸೇವೆಯನ್ನು ’ಹ್ಯಾಕರ್’ಗಳು ಅಸ್ತವ್ಯಸ್ತಗೊಳಿಸಿದ ಘಟನೆ ನಡೆದಿದೆ.
ರೈಲ್ವೆ ಸಂಚಾರ ವ್ಯವಸ್ಥೆಯ ಮೇಲೆ ದಾಳಿ ಮಾಡಿದ ಸೈಬರ್ ಹ್ಯಾಕರ್‌ಗಳು, ರೈಲು ಸಂಚಾರ ವಿಳಂಬ ಅಥವಾ ರದ್ದಾಗಿರುವ ಕುರಿತು ದೇಶದ ಎಲ್ಲ ರೈಲ್ವೆ ನಿಲ್ದಾಣಗಳ ಫಲಕಗಳಲ್ಲಿ ಸುಳ್ಳು ಮಾಹಿತಿ ಪ್ರಕಟಿಸಿದ್ದಾರೆ. ಇದರಿಂದಾಗಿ, ಶುಕ್ರವಾರ ದೇಶದಾದ್ಯಂತ ರೈಲು ಸೇವೆ ಅಸ್ತವ್ಯಸ್ಥಗೊಂಡಿತು.
ಪ್ರಯಾಣಿಕರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸುವಂತೆ ದೇಶದ ಪರಮೋಚ್ಛ ನಾಯಕ ಅಯತೊಲ್ಲಾಹ್ ಅಲಿ ಖಮೆನಿಯಾ ಅವರ ದೂರವಾಣಿ ಸಂಖ್ಯೆಯನ್ನು ಸಹ ಹ್ಯಾಕರ್‌ಗಳು ನೀಡಿದ್ದರು.
ಸೈಬರ್ ದಾಳಿಯಿಂದಾಗಿ ರೈಲ್ವೆ ನಿಲ್ದಾಣಗಳಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.
ಯಾವ ಸಂಘಟನೆಗಳು ಸೈಬರ್ ದಾಳಿಯ ಜವಾಬ್ದಾರಿಯನ್ನು ಹೊತ್ತುಕೊಂಡಿಲ್ಲ. ಘಟನೆಯಿಂದಾಗಿ ಶುಕ್ರವಾರ ಬೆಳಿಗ್ಗೆ ಇರಾನ್ ದೇಶದಾದ್ಯಂತ ರೈಲು ಸಂಚಾರದ ಮೇಲೆ ನಿಗಾ ಇಡುವ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ವ್ಯವಸ್ಥೆಯ ಸಂಪರ್ಕ ಕಡಿತಗೊಂಡಿತ್ತು.ಇದು ಸೈಬರ್ ದಾಳಿಕೋರರ ಕೆಲಸವೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಸುದ್ದಿ ಸಂಸ್ಥೆ ’ಫಾರ್ಸ್’ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.