ಲಾಹೋರ್: ಮುಂಬೈ ದಾಳಿ ಸಂಚುಕೋರ ಮತ್ತು ನಿಷೇಧಿತ ಜೆಯುಡಿ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಹಾಗೂ ಆತನ ಮೂವರು ಸಹಚರರು, ಉಗ್ರರಿಗೆ ಆರ್ಥಿಕ ನೆರವು ನೀಡಿರುವುದು ಸಾಬೀತಾಗಿದೆ ಎಂದು ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ.
ಹಫೀಜ್ ಸಯೀದ್ ಹಾಗೂ ಹಫೀಜ್ ಅಬ್ದುಲ್ ಸಲಾಮ್ ಬಿನ್ ಮೊಹಮ್ಮದ್, ಮೊಹಮ್ಮದ್ ಅಶ್ರಫ್ ಹಾಗೂ ಜಾಫರ್ ಇಕ್ಬಾಲ್ ಅವರನ್ನು ದೋಷಿಗಳು ಎಂದು ನ್ಯಾಯಾಲಯ ಹೇಳಿದೆ.
ಸಾಕ್ಷಿದಾರರನ್ನು ನ್ಯಾಯಾಲಯ ಮುಂದೆ ಹಾಜರುಪಡಿಸುವಂತೆ ಸೂಚಿಸಿದ ನ್ಯಾಯಾಧೀಶ ಅರ್ಷದ್ ಹುಸೇನ್ ಬುಟ್ಟಾ, ಗುರುವಾರಕ್ಕೆ ವಿಚಾರಣೆಯನ್ನು ಮುಂದೂಡಿದರು.
69 ವರ್ಷದ ಸಯೀದ್ ಮತ್ತು ಆತನ ಸಹಚರರು ಈ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.