ADVERTISEMENT

ಹೈಟಿಯಲ್ಲಿ ಭೂಕಂಪ: 11 ಸಾವು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2018, 7:13 IST
Last Updated 7 ಅಕ್ಟೋಬರ್ 2018, 7:13 IST
   

ಪೋರ್ಟ್‌ ಆ ಪ್ರಿನ್ಸ್: ಹೈಟಿ ವಾಯುವ್ಯ ಕರಾವಳಿ ಭಾಗದಲ್ಲಿ ಶನಿವಾರ ತಡರಾತ್ರಿ 5.9 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕನಿಷ್ಠ 11 ಜನರು ಮೃತಪಟ್ಟಿರುವ ಬಗ್ಗೆವರದಿಯಾಗಿದೆ.

ರಾಜಧಾನಿ ಪೋರ್ಟ್‌ ಆ ಪ್ರಿನ್ಸ್‌ನಪಶ್ಚಿಮಕ್ಕೆ 12 ಮೈಲು ದೂರದ ಸುಮಾರು 7 ಮೈಲು ಆಳ ಪ್ರದೇಶದಲ್ಲಿ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಭೂವಿಜ್ಞಾನ ಇಲಾಖೆಯ ವರದಿಯು ತಿಳಿಸಿದೆ.

ವಾಯುವ್ಯ ಪ್ರದೇಶ ಪೊಲೀಸ್‌ ಮುಖ್ಯಸ್ಥ ಜಾಕ್ಸನ್‌ ಹಿಲಾರೆ ಅವರು, ‘ನಗರದಲ್ಲಿ ಕನಿಷ್ಠ 7 ಜನರು ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರಬಹುದು’ ಎಂದು ಮಾಹಿತಿ ನೀಡಿದ್ದಾರೆ. ಇತರ ಪ್ರದೇಶಗಳಲ್ಲಿ ಬಾಲಕ ಸೇರಿದಂತೆ ನಾಲ್ಕು ಜನರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

ADVERTISEMENT

ಹೈಟಿ ಅಧ್ಯಕ್ಷ ಜೊವೆನಿಲ್‌ ಮೊಯ್ಸೆ, ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಜನರು ಧೃತಿಗೆಡದಂತೆ ಕರೆ ನೀಡಿದ್ದಾರೆ.

ಕೆರಿಬಿಯನ್‌ ದೇಶವಾಗಿರುವ ಹೈಟಿಯು ಭೂಕಂಪ ಹಾಗೂ ಜ್ವಾಲಾಮುಖಿಗಳು ಹೆಚ್ಚಾಗಿ ಸಂಭವಿಸುವ ಫೆಸಿಫಿಕ್‌ ಸಾಗರದ ರಿಂಗ್‌ ಆಫ್‌ ಫೈಯರ್‌ ಪ್ರದೇಶದಲ್ಲಿದೆ. 2010ರಲ್ಲಿ ಇಲ್ಲಿ 7.1 ತೀವ್ರತೆಯ ಭೂಕಂಪ ಸಂಭವಿಸಿತ್ತು. ಈ ವೇಳೆ ಸುಮಾರು 3 ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.