ADVERTISEMENT

ಅಮೆರಿಕ ಸೇನೆಯ ನೆರವು ಕೋರಿದ ಹೈಟಿ ಹಂಗಾಮಿ ಪ್ರಧಾನಿ

ಏಜೆನ್ಸೀಸ್
Published 10 ಜುಲೈ 2021, 5:08 IST
Last Updated 10 ಜುಲೈ 2021, 5:08 IST
ಹೈಟಿ: ಪೊಲೀಸ್ ಭದ್ರತೆ
ಹೈಟಿ: ಪೊಲೀಸ್ ಭದ್ರತೆ   

ಪೋರ್ಟ್-ಒ-ಪ್ರಿನ್ಸ್: ಹೈಟಿ ಅಧ್ಯಕ್ಷ ಜೊವಿನೆಲ್ ಮೊಯಿಸ್ ಹತ್ಯೆಯ ನಂತರ ದೇಶದಲ್ಲಿ ಶಾಂತಿ ಕಾಪಾಡುವುದರ ಜೊತೆಗೆ ಮೂಲಸೌಕರ್ಯಗಳನ್ನು ರಕ್ಷಿಸುವ ನಿಟ್ಟಿನಲ್ಲಿಹಂಗಾಮಿ ಪ್ರಧಾನಿ ಕ್ಲೌಡ್ ಜೋಸೆಫ್, ಅಮೆರಿಕ ಸೇನೆಯ ನೆರವನ್ನು ಕೋರಿದ್ದಾರೆ.

'ಖಂಡಿತವಾಗಿಯೂ ನಮಗೆ ಸಹಾಯ ಬೇಕು ಮತ್ತು ನಮ್ಮ ಅಂತರರಾಷ್ಟ್ರೀಯ ಪಾಲುದಾರರನ್ನು ಸಹಾಯಕ್ಕಾಗಿ ವಿನಂತಿ ಮಾಡಿದ್ದೇವೆ. ನಮ್ಮ ಜೊತೆಗಾರರು ಪರಿಸ್ಥಿತಿಯನ್ನು ನಿಭಾಯಿಸಲು ದೇಶದ ಪೊಲೀಸರಿಗೆ ಸಹಾಯ ಮಾಡಬಹುದೆಂದು ಭಾವಿಸುತ್ತೇನೆ' ಎಂದಿದ್ದಾರೆ.

'ಅಧಿಕಾರಕ್ಕಾಗಿ ಹೋರಾಟ, ಇದರಲ್ಲಿ ನಂಬಿಕೆಯಿಲ್ಲ. ಹೈಟಿಯಲ್ಲಿ ಅಧ್ಯಕ್ಷರಾಗಲು ಇರುವುದು ಒಂದೇ ಮಾರ್ಗ, ಅದೇನೆಂದರೆ ಚುನಾವಣೆ' ಎಂದು ಹೇಳಿದ್ದಾರೆ.

ಏತನ್ಮಧ್ಯೆ ಹೈಟಿ ಅಧ್ಯಕ್ಷರ ಕೊಲೆ ತನಿಖೆಗೆ ನೆರವಾಗಲು ಎಫ್‌ಬಿಐ ತನಿಖಾ ಸಂಸ್ಥೆ ಹಾಗೂ ಹೋಮ್‌ಲ್ಯಾಂಡ್ ಭದ್ರತಾ ಅಧಿಕಾರಿಗಳನ್ನು ರವಾನಿಸುವುದಾಗಿ ಅಮೆರಿಕ ಹೇಳಿದೆ.

ಮೊಯಿಸ್ ಹತ್ಯೆಯಲ್ಲಿ ಭಾಗಿಯಾಗಿರುವ ಕೊಲಂಬಿಯಾದವರನ್ನು ನಾಲ್ಕು ಕಂಪನಿಗಳು ನೇಮಕ ಮಾಡಿಕೊಂಡಿವೆ ಮತ್ತು ಡೊಮಿನಿಕನ್ ರಿಪಬ್ಲಿಕ್ ಮೂಲಕ ಎರಡು ಗುಂಪುಗಳಾಗಿ ಕೆರಿಬಿಯನ್ ರಾಷ್ಟ್ರಕ್ಕೆ ಪ್ರಯಾಣಿಸಿದ್ದರು ಎಂದು ಕೊಲಂಬಿಯಾ ಪೊಲೀಸರು ಮಾಹಿತಿ ನೀಡಿದ್ದಾರೆ.

ಹೈಟಿಯ ರಾಷ್ಟ್ರೀಯ ಪೊಲೀಸ್‌ ಪಡೆ ಮುಖ್ಯಸ್ಥ ಲಿಯಾನ್‌ ಚಾರ್ಲ್‌ಸ್‌ ಹೇಳಿಕೆಯ ಪ್ರಕಾರ, ಹೈಟಿ ಅಧ್ಯಕ್ಷರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರೆಗೆ 17 ಮಂದಿ ಶಂಕಿತರನ್ನು ಬಂಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.