ಒಸಾಕಾ (ಪಿಟಿಐ): ಭಾರತದ ಹಜ್ ಯಾತ್ರೆಯ ಕೋಟಾವನ್ನು 30 ಸಾವಿರದಷ್ಟು ಹೆಚ್ಚಿಸಲಾಗಿದೆ.
ಇದುವರೆಗೆ ಸೌದಿ ಅರೇಬಿಯಾ 1.7 ಲಕ್ಷ ಯಾತ್ರಾರ್ಥಿಗಳಿಗೆ ಅವಕಾಶ ಕಲ್ಪಿಸಿತ್ತು. ಈಗ 30 ಸಾವಿರದಷ್ಟು ಹೆಚ್ಚಿಸುವ ಮೂಲಕ 2 ಲಕ್ಷ ಮಂದಿಗೆ ಹಜ್ ಯಾತ್ರೆಯ ಅವಕಾಶ ದೊರೆಯಲಿದೆ.
ಯಾತ್ರಿಗಳ ಸಂಖ್ಯೆ ಹೆಚ್ಚಿಸುವ ವಿಷಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೌದಿ ಅರೇಬಿಯಾ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಜತೆ ನಡೆದ ಮಾತುಕತೆ ಸಂದರ್ಭದಲ್ಲಿ ಪ್ರಸ್ತಾಪಿಸಿದ್ದರು. ಕಳೆದ ವರ್ಷ ಹಜ್ ಕೋಟಾವನ್ನು 5000 ಹೆಚ್ಚಿಸಲಾಗಿತ್ತು. 2017ರಲ್ಲಿ ಹೆಚ್ಚುವರಿಯಾಗಿ 35000 ಮಂದಿಗೆ ಅವಕಾಶ ನೀಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.