ಕೈರೊ: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಗೆಲುವಿನ ಸನಿಹದಲ್ಲಿದ್ದಾರೆ. ಏಳು ನಿರ್ಣಾಯಕ ರಾಜ್ಯಗಳಲ್ಲಿಯೂ ಮುನ್ನಡೆ ಸಾಧಿಸುವ ಮೂಲಕ ವಿರೋಧಿ ಡೆಮಾಕ್ರೆಟಿಕ್ ಪಕ್ಷಕ್ಕೆ ಆಘಾತ ನೀಡಿದ್ದಾರೆ.
ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಹೊರಬೀಳುತ್ತಲೆ ಜಾಗತಿಕವಾಗಿ ಹಲವು ವಿಷಯಗಳು ಮುನ್ನೆಲೆಗೆ ಬಂದಿವೆ. ಇಸ್ರೇಲ್– ಹಮಾಸ್ ನಡುವಿನ ದೀರ್ಘ ಅವಧಿಯ ಯುದ್ಧವೂ ಇದರಲ್ಲಿ ಒಂದಾಗಿದೆ.
ಗಾಜಾ ಯುದ್ಧದ ಬಗ್ಗೆ ತಮ್ಮ ಭಾಷಣಗಳಲ್ಲಿ ಹಲವು ಬಾರಿ ಪ್ರಸ್ತಾಪಿಸಿದ್ದ ಟ್ರಂಪ್, ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಒಂದು ತಾಸಿನೊಳಗೆ ಗಾಜಾದಲ್ಲಿ ಯುದ್ಧವನ್ನು ನಿಲ್ಲಿಸುತ್ತೇನೆ ಎಂದಿದ್ದರು.
ಇದೀಗ ಅದೇ ಹೇಳಿಕೆಯನ್ನು ಪ್ರಸ್ತಾಪಿಸಿ ಮಾತನಾಡಿರುವ ಹಮಾಸ್ ಹಿರಿಯ ಅಧಿಕಾರಿ ಸಮಿ ಅಬು ಜುಹ್ರಿ, ‘ಯುದ್ಧ ನಿಲ್ಲಿಸುವ ಟ್ರಂಪ್ ಹೇಳಿಕೆ ಪರೀಕ್ಷೆಗೆ ಒಳಪಡುತ್ತದೆ’ ಎಂದಿದ್ದಾರೆ.
ಅಲ್ಲದೇ, ಹಿಂದಿನ ಅಧ್ಯಕ್ಷ ಜೋ ಬೈಡನ್ ಅವರು ಮಾಡಿದ ತಪ್ಪುಗಳಿಂದ ಟ್ರಂಪ್ ಪಾಠ ಕಲಿಯಲಿ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.