ADVERTISEMENT

Israel Hamas | ಮಹಿಳೆಯರು, ಮಕ್ಕಳು ಸೇರಿ 25 ಜನರನ್ನು ಬಿಡುಗಡೆ ಮಾಡಿದ ಹಮಾಸ್

ಏಜೆನ್ಸೀಸ್
Published 24 ನವೆಂಬರ್ 2023, 15:59 IST
Last Updated 24 ನವೆಂಬರ್ 2023, 15:59 IST
<div class="paragraphs"><p>ಹಮಾಸ್ ಬಿಡುಗಡೆ ಮಾಡಿದ ಒತ್ತೆಯಾಳುಗಳನ್ನು ಕರೆದೊಯ್ಯಲು ಇಸ್ರೇಲ್‌ನ ಪೆಟಾ ಟಿಕ್ವಾ ಬಳಿ ಕಾದು ನಿಂತಿರುವ ಆಂಬುಲೆನ್ಸ್‌ ಚಾಲಕ ಬಡುವಿನ ವೇಳೆಯಲ್ಲಿ ಪುಸ್ತಕ ಓದುತ್ತಿದ್ದಾರೆ</p></div>

ಹಮಾಸ್ ಬಿಡುಗಡೆ ಮಾಡಿದ ಒತ್ತೆಯಾಳುಗಳನ್ನು ಕರೆದೊಯ್ಯಲು ಇಸ್ರೇಲ್‌ನ ಪೆಟಾ ಟಿಕ್ವಾ ಬಳಿ ಕಾದು ನಿಂತಿರುವ ಆಂಬುಲೆನ್ಸ್‌ ಚಾಲಕ ಬಡುವಿನ ವೇಳೆಯಲ್ಲಿ ಪುಸ್ತಕ ಓದುತ್ತಿದ್ದಾರೆ

   

ರಾಯಿಟರ್ಸ್ ಚಿತ್ರ

ಟೆಲ್ ಅವೀವ್‌: ಇಸ್ರೇಲ್-ಹಮಾಸ್ ನಡುವೆ ನಾಲ್ಕು ದಿನಗಳ ಕದನ ವಿರಾಮ ಆರಂಭದ ನಂತರ 13 ಇಸ್ರೇಲಿ ಹಾಗೂ 12 ಥಾಯ್‌ ಒತ್ತಾಳುಗಳು ಸೇರಿದಂತೆ ಒಟ್ಟು 25 ಜನರನ್ನು ಹಮಾಸ್ ಶುಕ್ರವಾರ ಬಿಡುಗಡೆ ಮಾಡಿದೆ ಎಂದು ಈಜಿಪ್ಟ್ ಮಾಧ್ಯಮ ಹೇಳಿದೆ.

ADVERTISEMENT

ಬಿಡುಗಡೆಯಾದವರಲ್ಲಿ ಮಕ್ಕಳು ಹಾಗು ಮಹಿಳೆಯರು ಸೇರಿದ್ದಾರೆ. ಇಸ್ರೇಲ್-ಹಮಾಸ್ ನಡುವೆ ನಾಲ್ಕು ದಿನಗಳ ಕದನ ವಿರಾಮ ಇಂದಿನಿಂದ ಆರಂಭಗೊಂಡಿದ್ದು, ಮೊದಲ ತಂಡದಲ್ಲಿ 13 ಒತ್ತೆಯಾಳು ಸೇರಿದಂತೆ ಪ್ಯಾಲೆಸ್ಟೀನಿಯನ್‌ ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಕತಾರ್ ಈ ಮೊದಲು ಹೇಳಿತ್ತು.

ಕದನ ವಿರಾಮವು ಶುಕ್ರವಾರ ಬೆಳಿಗ್ಗೆ 7 ರಿಂದ ಪ್ರಾರಂಭವಾಗಿದೆ. ಹಂತ, ಹಂತವಾಗಿ ಹಮಾಸ್‌ ಬಂಡುಕೋರರಿಂದ 50 ಒತ್ತೆಯಾಳುಗಳ ಬಿಡುಗಡೆ ಹಾಗೂ ಪ್ರತಿಯಾಗಿ ಇಸ್ರೇಲ್‌ನಿಂದ 150 ಪ್ಯಾಲೆಸ್ಟೀನ್‌ ಕೈದಿಗಳ ಬಿಡುಗಡೆ ಕುರಿತಂತೆ ಒಪ್ಪಂದ ಆಗಿತ್ತು.

ಇಸ್ರೇಲ್‌ನ ಸೇನೆಯು ಗಾಜಾದಲ್ಲಿನ ಅಲ್‌ ಶಿಫಾ ಆಸ್ಪತ್ರೆಯ ಕೆಳಗೆ ಸುರಂಗ, ಹಮಾಸ್‌ ನೆಲೆ ಇದ್ದುದನ್ನು ಪತ್ತೆ ಹೆಚ್ಚಿದ್ದಾರೆ. ಈ ಆಸ್ಪತ್ರೆಯು ಇತ್ತೀಚೆಗೆ ಯುದ್ಧದ ಕೇಂದ್ರ ಸ್ಥಾನವಾಗಿತ್ತು.

ಆಸ್ಪತ್ರೆಯ ನಿರ್ದೇಶಕ ಮೊಹಮ್ಮದ್ ಅಬು ಸೆಲ್ಮಿಯಾ ಅವರನ್ನು ಇಸ್ರೇಲಿ ಸೇನೆ ವಶಕ್ಕೆ ಪಡೆದಿದೆ. ಇಸ್ರೇಲ್‌ ದಾಳಿಯಿಂದ ಗಾಜಾ ಪಟ್ಟಿಯಲ್ಲಿ ಮೃತಪಟ್ಟವರ ಸಂಖ್ಯೆ 13 ಸಾವಿರಕ್ಕೇರಿದೆ ಎಂದು ಹಮಾಸ್‌ನ ಆರೋಗ್ಯ ಸಚಿವಾಲಯ ಪ್ರಕಟಿಸಿದೆ. ಅಲ್ಲದೆ, ಈ ಅವಧಿಯಲ್ಲಿ ಸುಮಾರು 6 ಸಾವಿರ ಜನರು ನಾಪತ್ತೆಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.