ಗಾಜಾ: ಇಬ್ಬರು ಅಮೆರಿಕನ್ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಿದ ಬೆನ್ನಲ್ಲೇ ಹಮಾಸ್ ಬಂಡುಕೋರರು ಸೋಮವಾರ ಇನ್ನಿಬ್ಬರು ಇಸ್ರೇಲಿ ಪ್ರಜೆಗಳನ್ನು ಬಿಡುಗೊಳಿಸಿದೆ.
ನುರಿತ್ ಕೂಪರ್(85) ಮತ್ತು ಯೋಚೆವೆಡ್ ಲಿಫ್‌ಶಿಟ್ಜ್(79) ಬಿಡುಗೊಂಡ ಇಸ್ರೇಲಿ ಮಹಿಳೆಯರು ಎಂದು ಇಸ್ರೇಲಿ ಪ್ರಧಾನಿ ಕಚೇರಿ ತಿಳಿಸಿದೆ.
ಮಹಿಳೆಯರ ಕುಟುಂಬ ಇಸ್ರೇಲ್‌ನ ನಿರ್ ಓಜ್ ಕಿಬ್ಬುತ್ಜ್ ಪ್ರದೇಶದಲ್ಲಿ ವಾಸಿಸುತ್ತಿದ್ದು, ಅಕ್ಟೋಬರ್ 7ರಂದು ನಡೆದ ದಾಳಿಯ ವೇಳೆ ಇವರ ಕುಟುಂಬವನ್ನು ಒತ್ತೆಯಾಳುಗಳನ್ನಾಗಿ ಕರೆದುಕೊಂಡು ಹೋಗಲಾಗಿತ್ತು. ಇಬ್ಬರ ಗಂಡಂದಿರನ್ನು ಬಂಡುಕೋರರು ಬಿಡುಗಡೆಗೊಳಿಸಿಲ್ಲ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.
ಒತ್ತೆಯಾಳುಗಳನ್ನು ಅಂತರರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿಗೆ(ಐಸಿಆರ್‌ಸಿ) ಒಪ್ಪಿಸಿದ್ದು, ಅವರು ಇದೀಗ ಮನೆಗೆ ತೆರಳುತ್ತಿದ್ದಾರೆ ಎಂದು ಐಸಿಆರ್‌ಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇಸ್ರೇಲ್ ಮೇಲಿನ ದಾಳಿ ವೇಳೆ ಹಮಾಸ್ ಬಂಡುಕೋರರು 200ಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.