ಗಾಜಾ: ಅಮೆರಿಕನ್ ಒತ್ತೆಯಾಳುಗಳ ಜೊತೆಗೆ ಇನ್ನೂ ಇಬ್ಬರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ಉದ್ದೇಶಿಸಿದ್ದು, ಅವರನ್ನು ಸ್ವೀಕರಿಸಲು ಇಸ್ರೇಲ್ ನಿರಾಕರಿಸಿತ್ತು’ ಎಂದು ಹಮಾಸ್‌ನ ಸಶಸ್ತ್ರ ಪಡೆಯ ವಕ್ತಾರ ಅಬು ಉಬೈದಾ ತಿಳಿಸಿದ್ದಾರೆ.
‘ಅಮೆರಿಕನ್ ಪ್ರಜೆಗಳಾದ ಜುಡಿತ್ ಮತ್ತು ಅವರ ಮಗಳು ನತಾಲಿಯನ್ನು ಬಿಡುಗಡೆ ಮಾಡಿದ ದಿನವೇ ಇನ್ನೂ ಇಬ್ಬರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್ ನಿರ್ಧರಿಸಿತ್ತು. ನಮ್ಮ ಈ ಉದ್ದೇಶವನ್ನು ಕತಾರ್‌ಗೂ ತಿಳಿಸಲಾಗಿತ್ತು. ಆದರೆ ಇಸ್ರೇಲ್ ಸಮ್ಮತಿಸಿರಲಿಲ್ಲ’ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘ಮಾನವೀಯ ನೆಲೆಯಲ್ಲಿ ಭಾನುವಾರ ಇನ್ನಿಬ್ಬರು ಒತ್ತೆಯಾಳುಗಳನ್ನು ಬಿಡುಗಡೆಗೊಳಿಸಲು ಹಮಾಸ್ ಸಿದ್ದವಾಗಿದೆ’ ಎಂದು ಮತ್ತೊಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಹೇಳಿಕೆಗಳನ್ನು ‘ಅಜೆಂಡಾ’ ಎಂದು ಕರೆದಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ‘ಹಮಾಸ್‌ನ ಸುಳ್ಳು ಅಜೆಂಡಾಗಳಿಗೆ ಇಸ್ರೇಲ್ ಸೊಪ್ಪು ಹಾಕುವುದಿಲ್ಲ. ಒತ್ತೆಯಾಳುಗಳನ್ನು ಉಗ್ರರ ಕೈಯಿಂದ ಬಿಡಿಸಿಕೊಂಡು ಬರಲು ಎಲ್ಲ ಪ್ರಯತ್ನಗಳನ್ನು ಇಸ್ರೇಲ್ ಮಾಡಲಿದೆ’ ಎಂದು ಹೇಳಿದ್ದಾರೆ.
ಇಸ್ರೇಲ್ ಮೇಲೆ ಅಕ್ಟೋಬರ್ 7ರಂದು ದಾಳಿ ಮಾಡಿದ್ದ ಹಮಾಸ್ ಬಂಡುಕೋರರು 200ಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.