ಕೆಂಬ್ರಿಡ್ಜ್ (ಅಮೆರಿಕ): ‘ಎರಡನೇ ವಿಶ್ವಯುದ್ಧದ ಸಮಯದಲ್ಲಿಜಪಾನ್ ರಾಷ್ಟ್ರವು ಲೈಂಗಿಕ ಗುಲಾಮರನ್ನಾಗಿ ಬಂಧಿಸಿದ್ದ ಕೊರಿಯಾದ ಮಹಿಳೆಯರು, ಸ್ವತಃ ವೇಶ್ಯಾವಾಟಿಕೆ ಕೆಲಸವನ್ನು ಆರಿಸಿದ್ದರು’ ಎಂದು ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ಆರೋಪಿಸಿದ್ದಾರೆ. ಈ ಹೇಳಿಕೆಯು ಜಾಗತಿಕ ಮಟ್ಟದಲ್ಲಿ ವಿವಾದವನ್ನು ಸೃಷ್ಟಿಸಿದೆ.
‘ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಮಹಿಳೆಯರನ್ನು ಒತ್ತಾಯಪೂರ್ವಕವಾಗಿ ಸೇನಾ ಸಿಬ್ಬಂದಿಯ ಲೈಂಗಿಕ ಗುಲಾಮರನ್ನಾಗಿ ಇರಿಸಲಾಗಿತ್ತು’ ಎಂಬ ವಿಷಯವನ್ನು ಜೆ. ಮಾರ್ಕ್ ರಾಮ್‌ಸೇಯರ್ ಅವರು ತಮ್ಮ ಲೇಖನದಲ್ಲಿ ಅಲ್ಲಗೆಳೆದಿದ್ದಾರೆ.
ಬದಲಿಗೆ ಮಹಿಳೆಯರು ಸ್ವತಃ ಲೈಂಗಿಕ ಕಾರ್ಯಕರ್ತೆಯಾಗಿರಲು ಒಪ್ಪಂದ ಮಾಡಿಕೊಂಡಿದ್ದರು ಎಂದು ರಾಮ್‌ಸೇಯರ್ ವಾದಿಸಿದ್ದಾರೆ.
ರಾಮ್‌ಸೇಯರ್ ಅವರ‘ಕಾಂಟ್ರಕ್ಟಿಂಗ್ ಫಾರ್ ಸೆಕ್ಸ್ ಇನ್ ದಿ ಫೆಸಿಫಿಕ್ ವಾರ್’ ಎಂಬ ಶೀರ್ಷಿಕೆಯ ಲೇಖನವು ಡಿಸೆಂಬರ್‌ನಲ್ಲಿ ಆನ್‌ಲೈನ್‌ನಲ್ಲಿ ಪ್ರಕಟವಾಗಿತ್ತು. ‘ಇಂಟರ್‌ನ್ಯಾಷನಲ್ ರಿವ್ಯೂ ಆಫ್ ಲಾ ಆ್ಯಂಡ್ ಎಕನಾಮಿಕ್ಸ್‘ ನಿಯತಕಾಲಿಕದ ಮಾರ್ಚ್ ತಿಂಗಳ ಆವೃತ್ತಿಯಲ್ಲಿ ಅದು ಪ್ರಕಟವಾಗಲು ನಿಗದಿಯಾಗಿದೆ.
‘ಇದು ಜಪಾನ್ ಮತ್ತು ದಕ್ಷಿಣ ಕೊರಿಯಾದ ನಡುವಿನ ರಾಜಕೀಯ ವಿವಾದವನ್ನು ತೀವ್ರಗೊಳಿಸಿದೆ. ಮಹಿಳೆಯರ ಮೇಲೆ ಅತ್ಯಾಚಾರ ಮಾಡಲಾಗಿದೆ. ಇದಕ್ಕೆ ಜಪಾನ್ ಕ್ಷಮೆಯಾಚಿಸಬೇಕು ಮತ್ತು ಪರಿಹಾರ ನೀಡಬೇಕು’ ಎಂದು ದಕ್ಷಿಣ ಕೊರಿಯಾವು ಜಪಾನ್ ಮೇಲೆ ದೀರ್ಘಕಾಲದಿಂದ ಒತ್ತಡ ಹೇರುತ್ತಿದೆ.
ರಾಮ್‌ಸೇಯರ್ ಲೇಖನವನ್ನು ಖಂಡಿಸಿ ಉತ್ತರ ಮತ್ತು ದಕ್ಷಿಣ ಕೊರಿಯಾದ ಹಲವು ವಿದ್ವಾಂಸರು ಪತ್ರವೊಂದಕ್ಕೆ ಸಹಿ ಹಾಕಿದ್ದಾರೆ. 1000 ಕ್ಕೂ ಅರ್ಥಶಾಸ್ತ್ರಜ್ಞರು ಕೂಡ ಇದನ್ನು ಖಂಡಿಸಿ ಪ್ರತ್ಯೇಕ ಪತ್ರವೊಂದಕ್ಕೆ ಸಹಿ ಹಾಕಿದ್ದಾರೆ.
1990ರಲ್ಲಿ ಜಪಾನಿನ ಸೇನಾ ಸಿಬ್ಬಂದಿಯ ‘ಕಂಫರ್ಟ್ ಸ್ಟೇಷನ್’ನಲ್ಲಿ ಮಹಿಳೆಯರನ್ನು ಲೈಂಗಿಕವಾಗಿ ಬಳಸಲಾಗುತ್ತಿತ್ತು ಎಂಬ ವಿಷಯವನ್ನು ಕೆಲ ಸಂತ್ರಸ್ತ ಮಹಿಳೆಯರು ಬಿಚ್ಚಿಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.