ADVERTISEMENT

ಇಸ್ರೇಲ್‌ –ಹಮಾಸ್‌ ಯುದ್ಧ: 23,210 ಪ್ಯಾಲೆಸ್ಟೀನಿಯರ ಸಾವು

ಏಜೆನ್ಸೀಸ್
Published 9 ಜನವರಿ 2024, 15:12 IST
Last Updated 9 ಜನವರಿ 2024, 15:12 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಗಾಜಾ ನಗರ: ಇಸ್ರೇಲ್ ಮತ್ತು ಹಮಾಸ್‌ ಬಂಡುಕೋರರ ನಡುವೆ ಅಕ್ಟೋಬರ್‌ 7ರಂದು ಯುದ್ಧ ಆರಂಭವಾದಂದಿನಿಂದ ಈವರೆಗೆ ಪ್ಯಾಲೆಸ್ಟೀನ್‌ ಪ್ರದೇಶದಲ್ಲಿ 23,210 ಮಂದಿ ಮೃತಪಟ್ಟಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಮಂಗಳವಾರ ಹೇಳಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ 126 ಮಂದಿ ಮೃತಪಟ್ಟಿದ್ದಾರೆ. ಗಾಜಾ ಪಟ್ಟಿಯಲ್ಲಿ ಇದುವರೆಗೆ 59,167 ಮಂದಿ ಗಾಯಗೊಂಡಿದ್ದಾರೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.‌

ADVERTISEMENT

ಮೂವರು ಪ್ಯಾಲೆಸ್ಟೀನಿಯರ ಹತ್ಯೆ:

ಇಸ್ರೇಲ್‌ನ ಅಧೀನದಲ್ಲಿರುವ ವೆಸ್ಟ್‌ ಬ್ಯಾಂಕ್‌ ನಗರದ ತುಲ್ಕರ್ಮ್‌ನಲ್ಲಿ ಇಸ್ರೇಲ್‌ ಯೋಧರು ಮೂವರು ಪ್ಯಾಲೆಸ್ಟೀನಿಯರನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ ಎಂದು ಪ್ಯಾಲೆಸ್ಟೀನ್‌ನ ಆರೋಗ್ಯ ಸಚಿವಾಲಯ ಹೇಳಿದೆ.

‘ಗಾಜಾ, ವೆಸ್ಟ್‌ ಬ್ಯಾಂಕ್‌ ಪ್ಯಾಲೆಸ್ಟೀನ್‌ಗೆ ಸೇರಿದ್ದು’:

ಗಾಜಾ ಮತ್ತು ವೆಸ್ಟ್‌ ಬ್ಯಾಂಕ್‌, ಪ್ಯಾಲೇಸ್ಟೀನ್‌ಗೆ ಸೇರಿದ ಪ್ರದೇಶವೆಂದು ಈಜಿಪ್ಟ್‌ ಮತ್ತು ಜರ್ಮನಿ ಒಪ್ಪಿಕೊಂಡಿರುವುದಾಗಿ ಜರ್ಮನಿಯ ವಿದೇಶಾಂಗ ಸಚಿವೆ ಅನ್ನಾಲೆನಾ ಬೇರ್ಬಾಕ್ ಅವರು ತಿಳಿಸಿದ್ದಾರೆ. ಈಜಿಪ್ಟ್‌ನ ಕೈರೊಗೆ ಭೇಟಿ ನೀಡಿರುವ ಅವರು ಈ ಹೇಳಿಕೆ ನೀಡಿದ್ದಾರೆ.

ಡ್ರೋನ್‌ ದಾಳಿ: ಕಮಾಂಡರ್‌ ವಿಸ್ಸಾಂ ತಾವಿಲ್‌ ಅವರ ಹತ್ಯೆಗೆ ಪ್ರತೀಕಾರವಾಗಿ ಉತ್ತರ ಇಸ್ರೇಲ್‌ನ ಸೇನಾ ಪಡೆಯ ಪ್ರಧಾನ ಕಚೇರಿಯನ್ನು ಗುರಿಯಾಗಿಸಿ ಡ್ರೋನ್‌ ದಾಳಿ ನಡೆಸಿರುವುದಾಗಿ ಲೆಬನಾನ್‌ನ ಹಿಜ್ಬುಲ್ಲಾ ಸಂಘಟನೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.