ಕಾಬೂಲ್: ಈ ಹಿಂದೆ ಅಫ್ಗಾನಿಸ್ತಾನದ ಅತ್ಯಂತ ಸುರಕ್ಷಿತ ಸ್ಥಳವಾಗಿದ್ದ ವಿಮಾನ ನಿಲ್ದಾಣದ ಪ್ರಯಾಣಿಕರ ಟರ್ಮಿನಲ್ ಹಾಳಾಗಿದೆ. ಖಾಲಿ ಇರುವ ಬುಲೆಟ್ ಕೇಸ್‌ಗಳು ನಿಲ್ದಾಣದ ಪ್ರವೇಶ ದ್ವಾರದಲ್ಲಿಯೇ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ಮಂಗಳವಾರ ಕಾಬೂಲ್ ಚಿತ್ರಣವೇ ಬದಲಾಗಿತ್ತು. ತಾಲಿಬಾನ್ ಯೋಧರು ಅತ್ಯಂತ ಖುಷಿಯಲ್ಲಿದ್ದು, ವಾಹನ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಹಸ್ತಲಾಘವ ನೀಡಿದರು. ಅಲ್ಲದೇ, ವಿಮಾನ ನಿಲ್ದಾಣಕ್ಕೆ ತೆರಳುವ ಮಾರ್ಗದಲ್ಲಿ ಹಾಕಿದ್ದ ಎಲ್ಲ ಚೆಕ್‌ಪೋಸ್ಟ್‌ಗಳನ್ನೂ ತೆರವುಗೊಳಿಸಲಾಗಿದೆ. ಅಮೆರಿಕದ ಸೇನಾಪಡೆಯ ಕೊನೆಯ ತುಕಡಿಯು ಅಫ್ಗಾನಿಸ್ತಾನ ತೊರೆಯುವ ಮುನ್ನ, ಕಾಬೂಲ್ ವಿಮಾನ ನಿಲ್ದಾಣದಲ್ಲಿದ್ದ ತನ್ನ ವಿಮಾನಗಳನ್ನು, ಸೇನಾ ಹೆಲಿಕಾಪ್ಟರ್‌ಗಳನ್ನು ನಾಶಗೊಳಿಸಿದೆ ಎಂದು ಅಮೆರಿಕ ರಕ್ಷಣಾ ಇಲಾಖೆ ಮಾಹಿತಿ ನೀಡಿದೆ.
73 ಯುದ್ಧವಿಮಾನಗಳು, ಶಸ್ತ್ರಸಜ್ಜಿತವಾದ 70 ವಾಹನಗಳನ್ನು, 27 ಜೀಪುಗಳನ್ನು ಮತ್ತೆ ಬಳಸಲಾಗದಂತೆ ಧ್ವಂಸಮಾಡಲಾಗಿದೆ. ವಿಮಾನದ ಕಿಟಕಿ ಹಾಗೂ ಕಾಕ್‌ಪಿಟ್‌ಗಳನ್ನೂ ಜಜ್ಜಿ ಹಾಕಲಾಗಿದ್ದು, ಟೈರ್‌ಗಳನ್ನೂ ನಾಶಗೊಳಿಸಲಾಗಿದೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.