ADVERTISEMENT

ಜರ್ಮನಿಯಲ್ಲಿ ಪ್ರವಾಹ, ಹಲವು ವಿಮಾನ ಸಂಚಾರ ರದ್ದು

ಎಪಿ ಚಿತ್ರ
Published 17 ಆಗಸ್ಟ್ 2023, 15:31 IST
Last Updated 17 ಆಗಸ್ಟ್ 2023, 15:31 IST
   

ಬರ್ಲಿನ್‌: ಜರ್ಮನಿಯ ಕೆಲ ಭಾಗಗಳಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ಫ್ರಾಂಕ್‌ಫರ್ಟ್‌ ವಿಮಾನ ನಿಲ್ದಾಣದಲ್ಲಿ ಹಲವು ವಿಮಾನಗಳ ಸಂಚಾರ ರದ್ದು ಮಾಡಲಾಗಿದೆ ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ.

ಬುಧವಾರ ಸಂಜೆ ವಿಮಾನ ನಿಲ್ದಾಣದಲ್ಲಿ ಭಾರಿ ಪ್ರಮಾಣದ ನೀರು ಸಂಗ್ರಹವಾಗಿದೆ ಮತ್ತು‌ ವಿಮಾನ ಆಗಮನ ಮತ್ತು ನಿರ್ಗಮನವನ್ನು ಎರಡು ಗಂಟೆಗೂ ಹೆಚ್ಚು ಕಾಲ ಸ್ಥಗಿತಗೊಳಿಸಲಾಗಿತ್ತು ಎಂದು ವಿಮಾನ ನಿಲ್ದಾಣ ತಿಳಿಸಿದೆ ಎಂದು ಜರ್ಮನ್ ಸುದ್ದಿ ಸಂಸ್ಥೆ ಡಿಪಿಎ ವರದಿ ಮಾಡಿದೆ.

ವಿಮಾನ ನಿಲ್ದಾಣದ ವೆಬ್‌ಸೈಟ್‌ ಪ್ರಕಾರ, ರಾತ್ರಿ 11 ಗಂಟೆ ವೇಳೆಗೆ ಸುಮಾರು 70 ವಿಮಾನಗಳ ಸಂಚಾರ ರದ್ದುಪಡಿಸಲಾಗಿದೆ. ಆದರೆ, ಫ್ರಾಂಕ್‌ಫರ್ಟ್‌ಗೆ ಹೋಗುವ 23 ವಿಮಾನಗಳನ್ನು ಇತರ ವಿಮಾನ ನಿಲ್ದಾಣಗಳಿಗೆ ಕಳುಹಿಸಲಾಗಿದೆ.

ADVERTISEMENT

ನೈಋತ್ಯ ಮತ್ತು ಮಧ್ಯ ಜರ್ಮನಿಯ ಕೆಲವು ಭಾಗಗಳಲ್ಲಿ ಸುರಿದ ಮಳೆಯಿಂದಾಗಿ ನೆಲಮಾಳಿಗೆಗಳು ಮತ್ತು ತಗ್ಗುಪ್ರದೇಶಗಳು ಜಲಾವೃತಗೊಂಡಿದ್ದವು. ಪಶ್ಚಿಮ ರುಹ್ರ್ ಜಿಲ್ಲೆಯ ಗೆಲ್ಸೆನ್ಕಿರ್ಚೆನ್‌ನಲ್ಲಿ ಹಲವಾರು ಹೆದ್ದಾರಿ ಅಂಡರ್ ಪಾಸ್‌ಗಳಲ್ಲಿ ನೀರು ನಿಂತಿದ್ದು, ಕಾರಿನಲ್ಲಿದ್ದ ಜನರನ್ನು ರಕ್ಷಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.