ಜೆರುಸಲೇಂ: ಲೆಬನಾನ್ನ ದಕ್ಷಿಣ ಭಾಗದಲ್ಲಿ ಹಿಜ್ಬುಲ್ಲಾದ ನಸ್ಸರ್ ಬ್ರಿಗೆಡ್ ರಾಕೆಟ್ ಘಟಕದ ಕಮಾಂಡರ್ ಅನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್ ಸೇನೆ ಶನಿವಾರ ಘೋಷಿಸಿದೆ.
2023ರ ಅಕ್ಟೋಬರ್ನಲ್ಲಿ ಇಸ್ರೇಲ್ ಮೇಲೆ ನಡೆದ ಸರಣಿ ದಾಳಿಗೆ, ಸದ್ಯ ಹತ್ಯೆಯಾಗಿರುವ ಕಮಾಂಡರ್ ಕಾರಣನಾಗಿದ್ದ ಎಂದು ಹೇಳಿದೆ.
ಈ ಬಗ್ಗೆ ಹಿಜ್ಬುಲ್ಲಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಗಾಜಾದಲ್ಲಿ ಇಬ್ಬರು ಯೋಧರು ಸಾವು
ಗಾಜಾ ಪಟ್ಟಿಯ ದಕ್ಷಿಣದಲ್ಲಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಇಸ್ರೇಲ್ನ ಇಬ್ಬರು ಯೋಧರು ಹತರಾಗಿದ್ದಾರೆ. ಇದರೊಂದಿಗೆ, ಹಮಾಸ್ ವಿರುದ್ಧ ಸಂಘರ್ಷದ ವೇಳೆ 2023ರ ಅಕ್ಟೋಬರ್ನಿಂದ ಪ್ಯಾಲೆಸ್ಟೀನ್ನಲ್ಲಿ ಮೃತಪಟ್ಟ ಇಸ್ರೇಲ್ ಸೈನಿಕರ ಸಂಖ್ಯೆ 780ಕ್ಕೆ ಏರಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.