ADVERTISEMENT

ಸಿನ್ವರ್ ಹತ್ಯೆ: ಇಸ್ರೇಲ್ ವಿರುದ್ಧ ಯುದ್ಧ ತೀವ್ರಗೊಳಿಸುವ ಶ‍ಪಥಗೈದ ಹಿಜ್ಬುಲ್ಲಾ

ರಾಯಿಟರ್ಸ್
Published 18 ಅಕ್ಟೋಬರ್ 2024, 5:41 IST
Last Updated 18 ಅಕ್ಟೋಬರ್ 2024, 5:41 IST
<div class="paragraphs"><p>ಇಸ್ರೇಲ್‌&nbsp;&nbsp;ಸೈನಿಕರು</p></div>

ಇಸ್ರೇಲ್‌  ಸೈನಿಕರು

   

ರಾಯಿಟರ್ಸ್ ಚಿತ್ರ

ಜೆರುಸಲೇಂ/ಕೈರೋ: ಹಮಾಸ್ ನಾಯಕ ಯಹ್ಯಾ ಸಿನ್ವರ್ ಹತ್ಯೆಯಿಂದ ಕೆರಳಿರುವ ಇರಾನ್ ಬೆಂಬಲಿತ ಲೆಬನಾನ್‌ನ ಬಂಡುಕೋರ ಸಂಘಟನೆ ಹಿಜ್ಬುಲ್ಲಾ, ಇಸ್ರೇಲ್ ವಿರುದ್ಧ ಯುದ್ಧ ತೀವ್ರಗೊಳಿಸುವ ಪ್ರತಿಜ್ಞೆ ಮಾಡಿದೆ. ಸಿನ್ವರ್ ಹತ್ಯೆಯು ಪ್ರತಿರೋಧದ ಮನೋಭಾವವನ್ನು ಇನ್ನೂ ಬಲಪಡಿಸಿದೆ ಎಂದು ಇರಾನ್ ಪ್ರತಿಕ್ರಿಯಿಸಿದೆ.

ADVERTISEMENT

2023ರ ಅ. 7ರಂದು ಇಸ್ರೇಲ್‌ ಮೇಲೆ ನಡೆಸಲಾಗಿದ್ದ ದಾಳಿಯ ಪ್ರಮುಖ ಸಂಚುಕೋರ ಸಿನ್ವರ್‌ ನನ್ನು ಹತ್ಯೆಗೈಯಲಾಗಿದೆ ಎಂದು ಇಸ್ರೇಲ್‌ ಗುರುವಾರ ಹೇಳಿದೆ. ಗಾಜಾದಲ್ಲಿ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು ಮೂವರು ಬಂಡುಕೋರರು ಮೃತಪಟ್ಟಿದ್ದು, ಇವರಲ್ಲಿ ಸಿನ್ವರ್‌ ಕೂಡ ಒಬ್ಬ ಎಂದಿದೆ.

ಈ ಹತ್ಯೆಯಿಂದ ಹಮಾಸ್‌ಗೆ ಭಾರಿ ಪೆಟ್ಟು ಬಿದ್ದಿದೆ. ಆದರೆ ಇದರಿಂದ ಯುದ್ಧ ಅಂತ್ಯಗೊಂಡಿಲ್ಲ. ಒತ್ತೆಯಾಳುಗಳನ್ನು ಬಿಡುಗಡೆ ಮಾಡುವವರೆಗೆ ಯುದ್ಧ ‌ಮುಂದುವರಿಯುತ್ತದೆ. ಸಿನ್ವರ್‌ ಹತ್ಯೆಯು ಹಮಾಸ್ ಪಿಡುಗು ನಿರ್ಮೂಲನೆಗೊಳಿಸುವ ಯತ್ನದಲ್ಲಿ ದೊಡ್ಡ ಮೈಲುಗಲ್ಲು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

ದಕ್ಷಿಣ ಗಾಜಾದ ರಫಾ ನಗರದಲ್ಲಿ ನೆಲ ಮಾರ್ಗದಲ್ಲಿ ನಡೆಸಿದ ದಾಳಿಯ ವೇಳೆ ಸಿನ್ವರ್ ನನ್ನು ಸೇನೆ ಹತ್ಯೆ ಮಾಡಿದೆ ಎಂದು ಇಸ್ರೇಲ್‌ ಸೇನೆಯ ರೇಡಿಯೊ ವಾಹಿನಿ ಸುದ್ದಿ ಬಿತ್ತರಿಸಿದೆ. ಮೂವರು ಬಂಡುಕೋರರಲ್ಲಿ ಸಿನ್ವರ್‌ ಅವರ ಶವವಿರುವ ದೃಶ್ಯಗಳ ವಿಡಿಯೊ, ಸೇನೆಯ ಬಳಿ ಇದೆ ಎಂದೂ ಅದು ಹೇಳಿದೆ.

ಆದರೆ ಸಿನ್ವರ್ ಮೃತಪಟ್ಟಿದ್ದಾರೆ ಎಂಬುದನ್ನು ಹಮಾಸ್ ಸಂಘಟನೆ ದೃಢಪಡಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.