ADVERTISEMENT

400 ಹಿಂದೂ ದೇಗುಲಗಳ ಜೀರ್ಣೋದ್ಧಾರ

ಸಿಯಾಲ್‌ಕೋಟ್‌, ಪೆಶಾವರ ನಗರಗಳಿಂದ ಪ್ರಕ್ರಿಯೆ ಆರಂಭ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 19:36 IST
Last Updated 11 ಏಪ್ರಿಲ್ 2019, 19:36 IST
ತೇಜಾ ಸಿಂಗ್‌ ದೇವಾಲಯ
ತೇಜಾ ಸಿಂಗ್‌ ದೇವಾಲಯ   

ಲಾಹೋರ್: ದೇಶದಾದ್ಯಂತ ಇರುವ ಹಿಂದೂ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿ ಅವುಗಳನ್ನು ಹಿಂದೂ ಸಮುದಾಯಕ್ಕೆ ಹಸ್ತಾಂತರ ಮಾಡಲು ಪಾಕಿಸ್ತಾನ ಸರ್ಕಾರ ತೀರ್ಮಾನಿಸಿದೆ.

ಇದು ಅಲ್ಲಿನ ಅಲ್ಪಸಂಖ್ಯಾತ ಹಿಂದೂ ಸಮುದಾಯದವರ ಬಹುಕಾಲದ ಬೇಡಿಕೆಯಾಗಿತ್ತು.

ಭಾರತ–ಪಾಕಿಸ್ತಾನ ವಿಭಜನೆಯ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿದ್ದ ಹಿಂದೂಗಳು ಭಾರತಕ್ಕೆ ತೆರಳಿದ ಬಳಿಕ ಅಲ್ಲಿನ ಹಲವು ದೇವಾಲಯಗಳು ಒತ್ತುವರಿಗೆ ಒಳಗಾಗಿದ್ದವು. ಕೆಲವು ದೇವಾಲಯಗಳನ್ನು ಮದರಸಾಗಳನ್ನಾಗಿ ಮಾರ್ಪಾಡು ಮಾಡಲಾಗಿತ್ತು.

ADVERTISEMENT

ಇದೀಗ 400 ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಿ ಹಿಂದೂಗಳಿಗೆ ಹಸ್ತಾಂತರಿಸಲು ಸರ್ಕಾರ ನಿರ್ಧರಿಸಿದೆಎಂದು ‘ಇಂಡಿಯಾ ಟುಡೆ’ ವರದಿ ಮಾಡಿದೆ. ಸಿಯಾಲ್‌ಕೋಟ್‌ನ ಜಗನ್ನಾಥ ದೇವಾಲಯ ಮತ್ತು 1000 ವರ್ಷಗಳಷ್ಟು ಹಳೆಯ ಶಿವಾಲಯ– ತೇಜ ಸಿಂಗ್‌ ದೇವಾಲಯ ಹಾಗೂ ಪೆಶಾವರದಲ್ಲಿರುವ ಗೋರಖ್‌ನಾಥ ದೇವಾಲಯದ ಜೀರ್ಣೋದ್ಧಾರದ ಮೂಲಕ ಸರ್ಕಾರ ಈ ಪ್ರಕ್ರಿಯೆ ಆರಂಭಿಸಲಿದೆ.

ಗೋರಖ್‌ನಾಥ ದೇವಾಲಯವನ್ನು ಪುನರಾರಂಭಿಸುವಂತೆ ಪಾಕಿಸ್ತಾನದ ನ್ಯಾಯಾಲಯ ಈ ಹಿಂದೆ ಆದೇಶ ನೀಡಿತ್ತು. ಇದನ್ನು ಪಾರಂಪರಿಕ ತಾಣ ಎಂದೂ ಗುರುತಿಸಲಾಗಿದೆ. ಪ್ರತಿವರ್ಷ ಎರಡರಿಂದ ಮೂರು ಪುರಾತನ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಲು ಸರ್ಕಾರ ತೀರ್ಮಾನಿಸಿದೆ.ದೇಶ

ವಿಭಜನೆ ವೇಳೆ ಪಾಕಿಸ್ತಾನಲ್ಲಿದ್ದ 428 ದೇವಾಲಯಗಳ ಪೈಕಿ 408 ಅನ್ನು 1990ರ ನಂತರ ರೆಸ್ಟೋರೆಂಟ್‌, ಆಟಿಕೆ ಅಂಗಡಿ, ಸರ್ಕಾರಿ ಕಚೇರಿ, ಶಾಲೆಗಳಾಗಿವೆ ಎಂದು ಆಲ್‌ ಪಾಕಿಸ್ತಾನ್‌ ಹಿಂದೂ ರೈಟ್ಸ್‌ ಮೂವ್‌ಮೆಂಟ್‌ ಸಂಘಟನೆ ಸಮೀಕ್ಷೆ ಹೇಳಿತ್ತು. ಸಿಂಧ್‌ನಲ್ಲಿ ಕನಿಷ್ಠ 11, ಪಂಜಾಬ್‌ನಲ್ಲಿ ನಾಲ್ಕು, ಬಲೂಚಿಸ್ತಾನದಲ್ಲಿ ಮೂರು ಮತ್ತುಖೈಬರ್‌ ಪಂಖ್ತುಖ್ವಾ ಪ್ರಾಂತ್ಯದಲ್ಲಿ ಎರಡು ದೇವಾಲಯಗಳು ಕಾರ್ಯಾಚರಿಸುತ್ತಿವೆ ಎಂದು ಈಚೆಗೆ ಸರ್ಕಾರ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.