ಲಂಡನ್: ಐರೋಪ್ಯ ಒಕ್ಕೂಟದಿಂದ ಹೊರಬರುವ ಬ್ರಿಟನ್‌ನ ಐತಿಹಾಸಿಕ ಬ್ರೆಕ್ಸಿಟ್ ಮಸೂದೆ ಗುರುವಾರ ಅಂಗೀಕಾರವಾಗಿದೆ. ಒಟ್ಟು 330ರಲ್ಲಿ 231 ಮತಗಳು ಮಸೂದೆಯ ಪರವಾಗಿ ಚಲಾವಣೆಯಾದವು.
ಮೂರು ದಿನಗಳ ಚರ್ಚೆ ನಂತರ ಮಸೂದೆ ಮಂಡನೆಯಾಗಿದೆ. ಹೊರಬರುವ ಒಪ್ಪಂದೊಂದಿಗೆ ಜನವರಿ 31ಕ್ಕೆ ಯುರೋಪಿಯನ್ ಒಕ್ಕೂಟದಿಂದ ಬ್ರಿಟನ್ ತ್ಯಜಿಸಲುಇಲ್ಲಿನ ಸಂಸದರು ಒಪ್ಪಿಗೆ ನೀಡಿದ್ದಾರೆ. ಇದರಿಂದ ಮೂರು ವರ್ಷಗಳ ತಿಕ್ಕಾಟ ಕೊನೆಯಾಗಿದೆ.
ಮಸೂದೆ ಸೋಮವಾರ ಸಂಸತ್ತಿನ ಮೇಲ್ಮನೆಯಲ್ಲಿ ಮಂಡನೆಯಾಗಲಿದೆ. ರಾಣಿ ಎರಡನೇ ಎಲಿಜಬೆತ್ ಅವರ ಅಂಕಿತದ ನಂತರ ಮಸೂದೆ ಕಾನೂನಾಗಿ ಜಾರಿಗೆ ಬರಲಿದೆ.
ಬ್ರಿಟನ್‌ನಲ್ಲಿಐದು ವರ್ಷಗಳಲ್ಲಿ ಮೂರನೇ ಸಾರ್ವತ್ರಿಕ ಚುನಾವಣೆ ನಡೆದಿದೆ. ಬ್ರೆಕ್ಸಿಟ್ ಕಾರಣಕ್ಕಾಗಿಯೇ ಕನ್ಸರ್ವೇಟಿವ್ ಪಕ್ಷದ ನಾಯಕ, ಪ್ರಧಾನಿ ಬೋರಿಸ್ ಜಾನ್ಸನ್ ಅವಧಿಗೂ ಮುನ್ನವೇ ಚುನಾವಣೆಗೆ ಹೋದರು.
ಇತ್ತೀಚೆಗೆ ಬ್ರಿಟನ್‌ನಲ್ಲಿ ನಡೆದ ಚುನಾವಣೆಯಲ್ಲಿಕನ್ಸರ್ವೇಟಿವ್ ಪಕ್ಷಶೇ 40ರಷ್ಟು ಮತಗಳನ್ನು ಗಳಿಸಿತ್ತು. ಐರೋಪ್ಯ ಒಕ್ಕೂಟದಿಂದ ಹೊರಗೆ ಬರುವ ಪ್ರಕ್ರಿಯೆಯನ್ನು (ಬ್ರೆಕ್ಸಿಟ್) ಸುಲಲಿತಗೊಳಿಸುವ ಬೋರಿಸ್ ಕೋರಿಕೆಗೆ ಜನ ಮನ್ನಣೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.