ಹಾಂಗ್‌ಕಾಂಗ್: ಇಲ್ಲಿನ ಡಿಸ್ನಿಲ್ಯಾಂಡ್ ಈ ತಿಂಗಳ 18ರಿಂದ ಸಾರ್ವಜನಿಕರ ಪ್ರವೇಶಕ್ಕೆ ಮತ್ತೆ ಮುಕ್ತವಾಗಲಿದೆ.
ಕೊರೊನಾ ಸೋಂಕು ಭೀತಿ ಕಾರಣ ಇದನ್ನು ಜನವರಿಯಿಂದ ಮುಚ್ಚಲಾಗಿತ್ತು. ಆದರೆ ಈಗ ಆರ್ಥಿಕ ಚಟುವಟಿಕೆಗಳು ಮತ್ತೆ ನಿಧಾನವಾಗಿ ಶುರುವಾಗಿರುವ ಹಿನ್ನೆಲೆಯಲ್ಲಿ ಈ ಮನರಂಜನಾ ತಾಣವನ್ನು ಪುನರಾರಂಭಿಸಲಾಗುತ್ತಿದೆ.
ಪ್ರವೇಶಿಗರ ಸಂಖ್ಯೆಗೆ ಮಿತಿ ಇರುತ್ತದೆ ಅಲ್ಲದೆ ಅಂತರವನ್ನೂ ಕಾಯ್ದುಕೊಳ್ಳಲಾಗುತ್ತದೆ. ಅಂತರ ಕಾಯ್ದುಕೊಳ್ಳಲು ಸಾಧ್ಯವಾಗದ ಕೆಲವು ಚಟುವಟಿಕೆಗಳು ಬಂದ್ ಆಗಿರುತ್ತವೆ. ಇಲ್ಲಿನ ಪಾರ್ಕ್‌ಗೆ ಭೇಟಿ ನೀಡುವ ಪ್ರವಾಸಿಗರು ಕೂಡ ಮುಖಗವಸು ಹಾಕಬೇಕು ಎಂದು ಡಿಸ್ನಿಲ್ಯಾಂಡ್ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.