ಹಾಂಗ್‌ಕಾಂಗ್: ಚೀನಾದ ತೈಶಾನ್ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಸೋರಿಕೆಯಾಗುತ್ತಿದೆ ಎನ್ನುವ ವರದಿಗಳ ಬಗ್ಗೆ ಹಾಂಗ್‌ಕಾಂಗ್ ತೀವ್ರ ಆತಂಕ ವ್ಯಕ್ತಪಡಿಸಿದೆ.
ಹಾಂಗ್‌ಕಾಂಗ್ ವೀಕ್ಷಣಾಲಯ ಮತ್ತು ಇತರ ಇಲಾಖೆಗಳ ಮಾಹಿತಿ ಪ್ರಕಾರ, ಸೋಮವಾರ ರಾತ್ರಿ ವೇಳೆಗೆ ನಗರದಲ್ಲಿ ವಿಕಿರಣದ ಮಟ್ಟವು ಸಾಮಾನ್ಯವಾಗಿತ್ತು. ಆದರೆ, ಸ್ಥಾವರದ ಸುರಕ್ಷತೆ ಕುರಿತು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳಿಂದ ಆತಂಕವಾಗಿದೆ ಎಂದುನಾಯಕಿ ಕ್ಯಾರಿ ಲ್ಯಾಮ್ ತಿಳಿಸಿದ್ದಾರೆ.
ಗುವಾಂಗ್‌ಡಾಂಗ್ ನಗರದ ಬಳಿ ಇರುವ ತೈಶಾನ್ ಪರಮಾಣು ವಿದ್ಯುತ್ ಸ್ಥಾವರವನ್ನು ಚೀನಾದ ಗುವಾಂಗ್‌ಡಾಂಗ್ ಅಣು ಶಕ್ತಿ ಸಮೂಹ ಮತ್ತು ಫ್ರಾನ್ಸ್‌ನ ಬಹುರಾಷ್ಟ್ರೀಯ ಕಂಪನಿಯಾದ ‘ಎಲೆಕ್ಟ್ರಿಸಿಟಿ ಡೆ ಫ್ರಾನ್ಸ್’ ಜಂಟಿಯಾಗಿ ನಿರ್ವಹಿಸುತ್ತಿವೆ. ಈ ಸ್ಥಾವರದಲ್ಲಿ ಸಮಸ್ಯೆಯಾಗಿದೆ ಎಂದು ಫ್ರಾನ್ಸ್ ಕಂಪನಿ ಇತ್ತೀಚೆಗಷ್ಟೇ ಹೇಳಿತ್ತು.
ಪರಮಾಣು ಘಟಕವು ಸುರಕ್ಷಿತ ಕ್ರಮಗಳನ್ನು ಕೈಗೊಂಡು ಈಗ ಕಾರ್ಯನಿರ್ವಹಿಸುತ್ತಿದೆ ಎಂದು ಈ ಕಂಪನಿ ತಿಳಿಸಿದೆ.
ಹಾಂಗ್‌ಕಾಂಗ್‌ನಿಂದ ಸುಮಾರು 135 ಕಿ.ಮೀ ದೂರದಲ್ಲಿರುವ ಈ ಪರಮಾಣು ಇಂಧನ ಘಟಕದಲ್ಲಿ ಸೋರಿಕೆ ಉಂಟಾದರೆ, ವಾಣಿಜ್ಯ ಕೇಂದ್ರವಾಗಿರುವ, ಹಾಂಗ್‌ಕಾಂಗ್ ಮೇಲೆ ತೀವ್ರ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ... ಬೆದರಿಕೆ ಆರೋಪ: ನ್ಯಾಟೊ ನಾಯಕರ ವಿರುದ್ಧ ಚೀನಾ ಕಿಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.