ADVERTISEMENT

ಸೋಂಕು ಪ್ರಕರಣಗಳ ಇಳಿಕೆ: ನಿಯಮಗಳ ಸಡಿಲಿಕೆಗೆ ಮುಂದಾದ ಹಾಂಗ್‌ಕಾಂಗ್‌

ಏಜೆನ್ಸೀಸ್
Published 25 ಆಗಸ್ಟ್ 2020, 9:44 IST
Last Updated 25 ಆಗಸ್ಟ್ 2020, 9:44 IST
ಹಾಂಗ್‌ಕಾಂಗ್‌ ನಗರ
ಹಾಂಗ್‌ಕಾಂಗ್‌ ನಗರ   

ಹಾಂಗ್‌ಕಾಂಗ್‌: ಹಾಂಗ್‌ಕಾಂಗ್‌ನಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತಿರುವುದರಿಂದ ಕೆಲವೊಂದು ನಿಯಮಗಳನ್ನು ಸಡಿಲಿಸಲು ನಿರ್ಧರಿಸಲಾಗಿದೆ.

ಇದುವರೆಗೆ ಹೋಟೆಲ್‌ಗಳಲ್ಲಿ ಸಂಜೆ 6 ಗಂಟೆವರೆಗೆ ಮಾತ್ರ ಸೇವೆ ನೀಡಲು ಅನುಮತಿ ನೀಡಲಾಗಿತ್ತು. ಈ ಸಮಯದ ಮಿತಿಯನ್ನು ವಿಸ್ತರಿಸಲು ನಿರ್ಧರಿಸಿದ್ದು, ಶುಕ್ರವಾರದಿಂದ ರಾತ್ರಿ 9 ಗಂಟೆವರೆಗೂ ತೆರೆಯಲು ಅವಕಾಶ ದೊರೆಯಲಿದೆ.

ಇನ್ನೂಬ್ಯೂಟಿ ಸಲೂನ್‌, ಸಿನಿಮಾ ಮಂದಿರ ಸೇರಿದಂತೆ ಕೆಲ ಕ್ರೀಡಾ ಸ್ಥಳಗಳನ್ನು ಮತ್ತೆ ತೆರೆಯಲು ಅನುಮತಿ ನೀಡಲಾಗಿದೆ. ಇನ್ನು ಮುಂದೆ ಉದ್ಯಾನಗಳಲ್ಲಿ ವ್ಯಾಯಮ, ಅಭ್ಯಾಸಗಳನ್ನು ಮಾಡುವಾಗ ಮುಖಗವಸು ಧರಿಸುವುದು ಕಡ್ಡಾಯವಲ್ಲ ಎಂದು ಸರ್ಕಾರ ಹೇಳಿದೆ.

ADVERTISEMENT

‘ಕೊರೊನಾ ಸೋಂಕಿನ ಪ್ರಕರಣದಲ್ಲಿ ಇಳಿಮುಖ ಕಂಡಾಗ ಕೆಲವೊಂದು ನಿಯಮಗಳಲ್ಲಿ ಸಡಿಲಿಕೆ ಮಾಡಬೇಕಾಗುತ್ತದೆ ಎಂದು ಹಾಂಗ್‌ಕಾಂಗ್‌ ಆರೋಗ್ಯ ಸಚಿವೆ ಸೋಫಿಯಾ ಚನ್‌ ಅವರು ಪ್ರತಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಹಾಂಗ್‌ಕಾಂಗ್‌ನಲ್ಲಿ ಕೊರೊನಾ ವೈರಸ್ ನಿಯಂತ್ರಿಸಲು ಅತಿ ಕಠಿಣ ನಿಯಮಗಳನ್ನು ಹೇರಲಾಗಿತ್ತು. ಸೋಮವಾರ ಕೇವಲ 9 ಹೊಸ ಪ್ರಕರಣಗಳು ವರದಿಯಾಗಿದ್ದು, ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಹಾಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಪಾಲಿಸಬೇಕಾದ ಕೆಲ ನಿಯಮಗಳಲ್ಲಿ ಸಡಿಲಿಕೆ ಮಾಡಲು ನಿರ್ಧರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.