ಹ್ಯೂಸ್ಟನ್ (ಅಮೆರಿಕ): ಇಲ್ಲಿನ ಪೊಲೀಸ್ ಅಧಿಕಾರಿಯೊಬ್ಬರನ್ನು ಸೋಮವಾರ ಉತ್ತರ ಹ್ಯೂಸ್ಟನ್ ಮೋಟೆಲ್ ಪಕ್ಕದಲ್ಲಿ ಗುಂಡಿಕ್ಕಿ ಹತ್ಯೆಗೈಯಲಾಗಿದೆ. ಆರೋಪಿಗಳಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ಹ್ಯೂಸ್ಟನ್ ಪೊಲೀಸ್ ಸಾರ್ಜೆಂಟ್ ಸೀನ್ ರಿಯಾಸ್ ಅವರು ರಕ್ತಸಿಕ್ತಗೊಂಡ ಸ್ಥಿತಿಯಲ್ಲಿ ಸೋಮವಾರ ಮಧ್ಯಾಹ್ನ 1.30ರಷ್ಟಕ್ಕೆ ಮೋಟೆಲ್ ಕಚೇರಿಗೆ ಆಗಮಿಸಿದ್ದರು. ಅವರ ಶರೀರದಲ್ಲಿ ಹಲವು ಗುಂಡಿನ ಗಾಯಗಳಿದ್ದವು ಎಂದು ಸಾಕ್ಷಿದಾರರು ಪೊಲೀಸರಿಗೆ ಮಾಹಿತಿ ನೀಡಿದರು.
ಸೀನ್ ರಿಯಾಸ್ ಅವರು ಸಾಮಾನ್ಯ ಉಡುಗೆಯಲ್ಲಿ ಅಂತರರಾಜ್ಯ 45 (ಹೆದ್ದಾರಿ) ಮೂಲಕ ಕೆಲಸದ ಸ್ಥಳದತ್ತ ಸಾಗುತ್ತಿದ್ದರು. ಈ ವೇಳೆ ನೀಲಿ ಬಣ್ಣದ ಮರ್ಸಿಡಿಸ್ ಕಾರಿನಲ್ಲಿದ್ದ ವ್ಯಕ್ತಿಯೊಂದಿಗೆ ಗುಂಡಿನ ಚಕಮಕಿ ನಡೆದಿದೆ ಎಂದು ಪೊಲೀಸ್ ಮುಖ್ಯಸ್ಥ ಆರ್ಟ್ ಅಸೆವೆಡೊ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.