ವಾಷಿಂಗ್ಟನ್:ಚೀನಾದ ಬೃಹತ್ ದೂರಸಂಪರ್ಕ ಕಂಪನಿ ‘ಹುವೈ’ ವ್ಯಾಪಾರ ರಹಸ್ಯಗಳನ್ನು ಕಳವು ಮಾಡುತ್ತಿದೆ ಎಂದು ಅಮೆರಿಕ ಆರೋಪಿಸಿದೆ.
ಮಾಹಿತಿಗಳನ್ನು ಕಳವು ಮಾಡುತ್ತಿರುವುದಲ್ಲದೆ, ಇರಾನ್ ಮೇಲೆ ಅಮೆರಿಕ ವಿಧಿಸಿದ್ದ ನಿರ್ಬಂಧ ನಿಯಮಗಳನ್ನೂ ಚೀನಾ ಉಲ್ಲಂಘಿಸಿದೆ ಎಂದು ಅದು ದೂರಿದೆ. ಇದೇ ಜನವರಿ 30 ಮತ್ತು 31ರಂದು ಉಭಯ ದೇಶಗಳ ನಡುವೆ ಮಹತ್ವದ ವ್ಯಾಪಾರ ಮಾತುಕತೆ ನಡೆಯುವ ಮುನ್ನವೇ ಈ ರೀತಿಯ ಆರೋಪ ಮಾಡಿರುವುದು ಮಹತ್ವ ಪಡೆದಿದೆ.
ಹಣಕಾಸು ಅವ್ಯವಹಾರ ನಡೆಸಿದ ಆರೋಪದ ಮೇಲೆ ಬಂಧಿತರಾಗಿದ್ದ ಮೆಂಗ್, ಸದ್ಯ ಜಾಮೀನು ಪಡೆದು ಕೆನಡಾದಲ್ಲಿದ್ದಾರೆ. ಮೆಂಗ್, ಹುವೈ ಕಂಪನಿಯ ಸ್ಥಾಪಕನ ಮಗಳು.
ರೊಬೊ ಮಾದರಿ ಕಳವು
ಫೋನ್ ಪರೀಕ್ಷಿಸುವ ರೊಬೊವನ್ನು ತಯಾರಿಸುವ ಕುರಿತ ಮಾಹಿತಿಯನ್ನು ಹುವೈ ಕಳವು ಮಾಡಿದೆ ಎಂದು ಅಮೆರಿಕ ದೂರಿದೆ. ವಾಷಿಂಗ್ಟನ್ ಮೂಲದ ‘ಟಿ–ಮೊಬೈಲ್ ಯುಎಸ್‌ಎ’ ಈ ರೊಬೊ ಮಾದರಿಯನ್ನು ಅಭಿವೃದ್ಧಿ ಪಡಿಸಿದ್ದಲ್ಲದೆ, ಅದಕ್ಕೆ ‘ಟ್ಯಾಪಿ’ ಎಂದು ಹೆಸರಿಟ್ಟಿತ್ತು. ಇದರ ಚಿತ್ರವನ್ನು ರಹಸ್ಯವಾಗಿ ಸೆರೆ ಹಿಡಿದಿರುವ ಹುವೈನ ಎಂಜಿನಿಯರ್‌ಗಳು, ರೊಬೊದ ಸಣ್ಣ ತುಣಕನ್ನೂ ಕದ್ದಿದ್ದಾರೆ ಎಂದು ಅಮೆರಿಕ ಆರೋಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.