ಮಾಸ್ಕೊ: ನಾಗರಿಕ ಸ್ಥಳಾಂತರಕ್ಕೆ ಅನುವಾಗುವ ನಿಟ್ಟಿನಲ್ಲಿ ಮಾನವೀಯ ನೆಲೆಯ ಮೇಲೆ ರಷ್ಯಾ ಬುಧವಾರ ಉಕ್ರೇನ್‌ನಲ್ಲಿ ಕದನ ವಿರಾಮ ಘೋಷಿಸಿರುವುದಾಗಿ ರಷ್ಯಾದ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.
ರಷ್ಯಾ ಕಾಲಮಾನದ ಪ್ರಕಾರ, ಇಂದು 10 ಗಂಟೆಯಿಂದ (ಮಾರ್ಚ್ 9) ರಷ್ಯಾ ಒಕ್ಕೂಟವು ಕದನ ವಿರಾಮ ಘೋಷಿಸಿದೆ ಹಾಗೂ ಮಾನವೀಯ ಕಾರಿಡಾರ್ ಕಲ್ಪಿಸುವುದಾಗಿ ರಷ್ಯಾದ ರಕ್ಷಣಾ ಸಚಿವಾಲಯದ ಘಟಕವು ತಿಳಿಸಿದೆ.
ಮಾರ್ಚ್ 9ರಂದು 3:00 ಗಂಟೆಗೂ ಮುನ್ನವೇ( ಮಾಸ್ಕೊ ಕಾಲಮಾನ) ಉಕ್ರೇನ್ ಜೊತೆಗೆ ನಿಗದಿತ ಮಾರ್ಗಗಳಲ್ಲಿ ಮಾನವೀಯ ಕಾರಿಡಾರ್‌ಗಳನ್ನು ತೆರೆಯುವುದಾಗಿ ಹೇಳಿದೆ.
ಸುಮಿಯಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳ ತೆರವು ಕಾರ್ಯಾಚರಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ರಷ್ಯಾ ಮತ್ತು ಉಕ್ರೇನ್ ‘ಸುರಕ್ಷಿತ ಕಾರಿಡಾರ್’ ಘೋಷಿಸಿದ್ದರಿಂದ ಮಂಗಳವಾರ ತೆರವು ಕಾರ್ಯಾಚರಣೆ ಸಾಧ್ಯವಾಯಿತು. ಸುಮಿ ನಗರದಲ್ಲಿ ಸಿಲುಕಿದ್ದ 694 ಭಾರತೀಯ ವಿದ್ಯಾರ್ಥಿಗಳನ್ನು ಅಲ್ಲಿಂದ ತೆರವು ಮಾಡಲಾಗಿದೆ.
ರಾಜಧಾನಿ ಕೀವ್‌ನ ಹೊರ ಭಾಗದಲ್ಲಿಯೂ ನಾಗರಿಕರನ್ನು ಸ್ಥಳಾಂತರಿಸುವ ಪ್ರಕ್ರಿಯೆ ನಡೆದಿದೆ. ಆದರೆ, ಬಂದರು ನಗರಿ ಮರಿಯೊಪೋಲ್‌ನೊಂದ ಜನರನ್ನು ಸ್ಥಳಾಂತರಿಸುವ ಪ್ರಯತ್ನಗಳು ಇತ್ತೀಚೆಗೆ ಹಲವು ಬಾರಿ ವಿಫಲವಾಗಿವೆ. ಈ ಬಗ್ಗೆ ಉಕ್ರೇನ್ ಮತ್ತು ರಷ್ಯಾ ಪರಸ್ಪರ ದೂಷಿಸಿಕೊಂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.