ಮೈದುಗುರಿ: ಈಶಾನ್ಯ ನೈಜೀರಿಯಾದಲ್ಲಿ ಬೋಕೊ ಹರಾಮ್ ಉಗ್ರರು ಒತ್ತೆಯಾಳಾಗಿರಿಸಿಕೊಂಡಿದ್ದ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ಸುಮಾರು 350 ಮಂದಿಯನ್ನು ರಕ್ಷಿಸಲಾಗಿದೆ ಎಂದು ಸೇನೆ ತಿಳಿಸಿದೆ.
‘ಸುಮಾರು 350 ಮಂದಿಯನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದ ಉಗ್ರರು, ಸಂಬಿಸಾ ಅರಣ್ಯ ಪ್ರದೇಶದಲ್ಲಿ ಗೋಪ್ಯವಾಗಿಟ್ಟಿದ್ದರು. ಅವರೆಲ್ಲರನ್ನು ರಕ್ಷಿಸಲಾಗಿದೆ. ಸಂತ್ರಸ್ತರನ್ನು ಟ್ರಕ್‌ಗಳ ಮೂಲಕ ಬೊರ್ನೊ ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಲಾಗಿದೆ’ ಎಂದು ಮೇಜರ್ ಜನರಲ್ ಕೆನ್ ಚಿಗ್ಬೂ ತಿಳಿಸಿದರು.
ಸಂಬಿಸಾ ಅರಣ್ಯ ಪ್ರದೇಶವನ್ನು ನೆಲೆಯಾಗಿಸಿಕೊಂಡಿರುವ ಬೋಕೊ ಹರಾಮ್ ಉಗ್ರರು, ಭದ್ರತಾ ಪಡೆಗಳು ಮತ್ತು ಜನರನ್ನು ಗುರಿಯಾಗಿಸಿ ದಾಳಿ ನಡೆಸುತ್ತಲೇ ಇರುತ್ತವೆ. ಒತ್ತೆಯಾಳುಗಳ ರಕ್ಷಣೆಗಾಗಿ ಈ ಅರಣ್ಯದಲ್ಲಿ ಒಂದು ದಿನ ಪೂರ್ಣವಾಗಿ ಸೇನಾ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಈ ಕಾರ್ಯಾಚರಣೆ ವೇಳೆ ಕೆಲವು ಉಗ್ರರನ್ನು ಕೊಂದು ಹಾಕಲಾಗಿದೆ. ಅಲ್ಲದೆ ಅವರ ತಾಣಗಳನ್ನು ನಾಶ ಮಾಡಲಾಗಿದೆ ಎಂದು ಸೇನಾಧಿಕಾರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.