ADVERTISEMENT

ಮಲೇರಿಯಾ ಮಾತ್ರೆಯಿಂದ ಕೋವಿಡ್ ಗುಣವಾಗುವ ಬದಲಿಗೆ ಸಾವಿನ ಅಪಾಯ: ಸಂಶೋಧನಾ ವರದಿ

ಏಜೆನ್ಸೀಸ್
Published 23 ಮೇ 2020, 3:36 IST
Last Updated 23 ಮೇ 2020, 3:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಪ್ಯಾರಿಸ್ : ಮಲೇರಿಯಾ ರೋಗಿಗಳಿಗೆ ನೀಡುವ ಹೈಡ್ರೊಕ್ಲೋರೊಕ್ವಿನ್ ಮತ್ತು ಕ್ಲೋರೊಕ್ವಿನ್ ಮಾತ್ರೆಗಳ ಸೇವನೆಯಿಂದ ಕೋವಿಡ್–19 ರೋಗಿಗಳಿಗೆ ಯಾವುದೇ ಉಪಯೋಗವಿಲ್ಲ. ಬದಲಿಗೆ ಕೋವಿಡ್ ರೋಗಿಗಳು ಸಾವನ್ನಪ್ಪುವ ಅಪಾಯವನ್ನು ಈ ಮಾತ್ರೆಗಳು ಹೆಚ್ಚಿಸುತ್ತವೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.

1 ಲಕ್ಷ ಕೋವಿಡ್ ರೋಗಿಗಳಿಗೆ ಈ ಮಾತ್ರೆಗಳನ್ನು ಪ್ರಾಯೋಗಿಕವಾಗಿ ನೀಡಲಾಗಿತ್ತು. ‘ದಿ ಲಾನ್ಸೆಟ್’ ನಿಯತಕಾಲಿಕೆಯಲ್ಲಿ ಈ ವರದಿ ಪ್ರಕಟವಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ‘ಈ ಮಾತ್ರೆಗಳಿಂದ ಕೋವಿಡ್ ಗುಣಪಡಿಸಬಹುದು. ವೈದ್ಯರ ವಿರೋಧವಿದ್ದರೂ ಪ್ರತಿದಿನ ಈ ಮಾತ್ರೆಗಳನ್ನು ಸೇವಿಸುತ್ತೇನೆ’ ಎಂದು ಹೇಳಿದ್ದರು. ಭಾರತದಿಂದ ಕೋಟ್ಯಂತರ ಮಾತ್ರೆಗಳನ್ನು ಅಮೆರಿಕ ಖರೀದಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT