ADVERTISEMENT

ನಾನೇ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ: ಜೋ ಬೈಡನ್

ಪಿಟಿಐ
Published 4 ಜುಲೈ 2024, 2:56 IST
Last Updated 4 ಜುಲೈ 2024, 2:56 IST
<div class="paragraphs"><p>ಜೋ ಬೈಡನ್</p></div>

ಜೋ ಬೈಡನ್

   

(ರಾಯಿಟರ್ಸ್ ಚಿತ್ರ)

ವಾಷಿಂಗ್ಟನ್: 2024ರ ನವೆಂಬರ್ 5ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ 'ನಾನೇ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿದ್ದು, ಸ್ಪರ್ಧೆಯಿಂದ ಹಿಂಜರಿಯಲು ನನ್ನ ಮೇಲೆ ಯಾವುದೇ ರೀತಿಯ ಒತ್ತಡವಿಲ್ಲ' ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಸ್ಪಷ್ಟಪಡಿಸಿದ್ದಾರೆ.

ADVERTISEMENT

ಟ್ರಂಪ್ ಜೊತೆಗಿನ ಮುಖಾಮುಖಿ ಚರ್ಚೆಯಲ್ಲಿ ಹಿನ್ನಡೆ ಅನುಭವಿಸಿದ ಬಳಿಕ ಡೆಮಾಕ್ರಟಿಕ್ ಪಕ್ಷದಲ್ಲೇ ಭಿನ್ನಾಭಿಪ್ರಾಯ ಮೂಡಿದ್ದು, ಜೋ ಬೈಡನ್ ಅವರು ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿಯಬೇಕು ಎಂದು ಪಕ್ಷದ ನಾಯಕರೇ ಅಭಿಪ್ರಾಯಪಡುತ್ತಾರೆ ಎಂದು ವರದಿಯಾಗಿತ್ತು.

'ನಾನು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ. ನನ್ನನ್ನು ಯಾರೂ ಹೊರಗೆ ತಳ್ಳುತ್ತಿಲ್ಲ. ನಾನು ಹಿಂಜರಿಯುವುದಿಲ್ಲ. ಕೊನೆಯವರೆಗೂ ನಾನು ರೇಸ್‌ನಲ್ಲಿದ್ದೇನೆ. ಈ ಬಾರಿ ಚುನಾವಣೆಯಲ್ಲಿ ನಾವು ಗೆಲ್ಲಲಿದ್ದೇವೆ' ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಮ್ಮ ಬೆಂಬಲಿಗರಿಗೆ ಮಾಡಿದ ಈ-ಮೇಲ್‌ನಲ್ಲಿ ಈ ಕುರಿತು ಬೈಡನ್ ಉಲ್ಲೇಖಿಸಿದ್ದಾರೆ.

'ನಾನು ಈ ಕೆಲಸವನ್ನು ಮಾಡಬಲ್ಲೆ ಎಂಬ ನಂಬಿಕೆ ಇಲ್ಲದಿದ್ದರೆ ಮತ್ತೆ ಸ್ಪರ್ಧಿಸುತ್ತಿರಲಿಲ್ಲ. ನಾವು ಮತ್ತೆ ಹೋರಾಡಲಿದ್ದು, ಮತಷ್ಟು ಕಠಿಣ ಪರಿಶ್ರಮ ವಹಿಸಲಿದ್ದೇವೆ. 2020ರಲ್ಲಿ ಟ್ರಂಪ್ ಅವರನ್ನು ಸೋಲಿಸಿದಂತೆ 2024ರಲ್ಲಿಯೂ ಸೋಲಿಸಲಿದ್ದೇವೆ. ಅದು ಅಷ್ಟು ಸುಲಭವಲ್ಲ. ಇದಕ್ಕಾಗಿ ನಿಮ್ಮೆಲ್ಲರ ಬೆಂಬಲದ ಅಗತ್ಯವಿದೆ' ಎಂದು ಹೇಳಿದ್ದಾರೆ.

ಒಂದು ವೇಳೆ ಅಧ್ಯಕ್ಷೀಯ ಚುನಾವಣೆ ಗೆದ್ದರೆ, 81 ವರ್ಷದ ಬೈಡನ್ ಅಮೆರಿಕದ ಇತಿಹಾಸದಲ್ಲೇ ಅಧ್ಯಕ್ಷರಾಗಿ ಆಯ್ಕೆಯಾದ ಅತಿ ಹಿರಿಯ ವ್ಯಕ್ತಿ ಎನಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.