ADVERTISEMENT

ರಾಜಕೀಯ ಆಟಕ್ಕೆ ಐಸಿಸಿ ವೇದಿಕೆಯಲ್ಲ: ಅಂತರರಾಷ್ಟ್ರೀಯ ನ್ಯಾಯಾಲಯ

ಏಜೆನ್ಸೀಸ್
Published 27 ಮೇ 2024, 19:19 IST
Last Updated 27 ಮೇ 2024, 19:19 IST
<div class="paragraphs"><p>ನ್ಯಾಯಾಲಯ</p></div>

ನ್ಯಾಯಾಲಯ

   

ಸಿಡ್ನಿ: ಹಮಾಸ್ ಮತ್ತು ಇಸ್ರೇಲ್ ಮುಖಂಡರ ವಿರುದ್ಧದ ಬಂಧನ ವಾರಂಟ್ ಕುರಿತು ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯದ (ಐಸಿಸಿ) ಮೇಲಿನ ಆರೋಪಿಗಳ ಬಗ್ಗೆ ಹೆಚ್ಚು ದೃಷ್ಟಿ ನೆಡಲಾಗಿದೆ. ಆದರೆ, ಅವರು ಏಕೆ ಆರೋಪಿಗಳಾಗಿದ್ದಾರೆ ಎಂಬುದರ ಕುರಿತು ಗಮನವೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ. 

ಅಂತರರಾಷ್ಟ್ರೀಯ ಅಪರಾಧ ನ್ಯಾಯಾಲಯದ ಪ್ರಾಸಿಕ್ಯೂಟರ್ ಕರೀಂ ಖಾನ್ ಸೋಮವಾರ ಮಾತನಾಡಿ, ‘ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಹಮಾಸ್ ಮುಖಂಡ ಯಹ್ಯಾ ಸಿನ್ವಾರ್ ಸೇರಿದಂತೆ ಪ್ರಮುಖ ನಾಯಕರ ಬಂಧನಕ್ಕೆ ಮೇ 20ರಂದು ವಾರಂಟ್ ಹೊರಡಿಸಲಾಗಿದೆ’ ಎಂದು ಘೋಷಿಸಿದರು. 

ADVERTISEMENT

ಐಸಿಸಿಯ ಈ ತೀರ್ಮಾನಕ್ಕೆ ವಿಶ್ವನಾಯಕರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಫ್ರಾನ್ಸ್ ಮತ್ತು ದಕ್ಷಿಣ ಆಫ್ರಿಕಾ, ನ್ಯಾಯಾಲಯದ ಈ ತೀರ್ಮಾನವು ನಿಷ್ಪಕ್ಷಪಾತವಾಗಿದೆ ಎಂದು ಬೆಂಬಲಿಸಿದರೆ, ಆಸ್ಟ್ರೇಲಿಯಾ ಮತ್ತು ಅಮೆರಿಕವು, ಈ ಘೋಷಣೆಯು ನಾಚಿಕೆಗೇಡಿನ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿವೆ. 

ಇಸ್ರೇಲ್ ನಾಯಕರನ್ನು ಹಮಾಸ್‌ನೊಂದಿಗೆ ಸಮೀಕರಿಸುವುದು ಅತಿರೇಕದ್ದು ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಟೀಕಿಸಿದ್ದಾರೆ. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಇಸ್ರೇಲ್ ಸರ್ಕಾರವೇ ಬೇರೆ ಮತ್ತು ಹಮಾಸ್ ಬಂಡುಕೋರರೇ ಬೇರೆ. ಈ ಬಗ್ಗೆ ಐಸಿಸಿ ಪುನರ್ ಪರಿಶೀಲನೆ ಮಾಡಬೇಕೆಂಬ ಒತ್ತಡಕ್ಕೆ ಸಿಲುಕಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.