ವಾಷಿಂಗ್ಟನ್ : ಬಿಸಿಲು ಮತ್ತು ತೇವಾಂಶ ಇರುವ ವಾತಾವರಣದಲ್ಲಿ ಗಾಳಿಯ ಗುಣಮಟ್ಟವನ್ನು ಸುಧಾರಿಸಲು ನವೀನ ತಂತ್ರಜ್ಞಾನಗಳ ಬಳಕೆಯೊಂದಿಗೆ ಮುಂಬೈನಲ್ಲಿ ಮನೆ ನಿರ್ಮಿಸಿದ್ದಕ್ಕಾಗಿ ಬಾಂಬೆ ಐಐಟಿ ವಿದ್ಯಾರ್ಥಿಗಳ ತಂಡವು ಅಮೆರಿಕದಲ್ಲಿ ನಡೆದ ಸೌರ ಡೆಕಾಥ್ಲಾನ್ ಸ್ಪರ್ಧೆ ‘2023 ಬಿಲ್ಡ್ ಚಾಲೆಂಜ್’ನಲ್ಲಿ ಎರಡನೇ ಸ್ಥಾನ ಗಳಿಸಿದೆ.
ಬಾಂಬೆ ಐಐಟಿಯ ‘ಶೂನ್ಯ’ ಎಂಬ ತಂಡ ಅಭಿವೃದ್ಧಿಪಡಿಸಿದ ವಿವಾನ್ ಎಂಬ ವಿನ್ಯಾಸ ಈ ಗೌರವಕ್ಕೆ ಪಾತ್ರವಾಗಿದೆ.
ಅಮೆರಿಕದ ಇಂಧನ ಇಲಾಖೆಯು ನಡೆಸುವ ಸೌರ ಡೆಕಾಥ್ಲಾನ್, ವಿದ್ಯಾರ್ಥಿಗಳಿಗಾಗಿ ದೀರ್ಘಸಮಯದವೆರೆಗೆ ನಡೆಸುವ ಸ್ಪರ್ಧೆಯಾಗಿದೆ. ಈ ಸ್ಪರ್ಧೆಯಲ್ಲಿ, ನವೀಕರಿಸಬಹುದಾದ ಶಕ್ತಿಗಳನ್ನು ಬಳಸಿಕೊಂಡು ಹೆಚ್ಚು ಪರಿಣಾಮಕಾರಿಯಾದ ಹಾಗೂ ನವೀನ ಮಾದರಿಯ ಕಟ್ಟಡಗಳನ್ನು ನಿರ್ಮಿಸುವಂಥ ಸವಾಲನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.
‘ಶೂನ್ಯ ಶಕ್ತಿ ಬಳಕೆಯ ಮನೆಯನ್ನು ನಿರ್ಮಿಸಿದ್ದಕ್ಕಾಗಿ ಬಾಲ್ ಸ್ಟೇಟ್ ವಿಶ್ವವಿದ್ಯಾಲಯವು ಮೊದಲ ಸ್ಥಾನ ಗಳಿಸಿತು. ಬಾಂಬೆ ಐಐಟಿ ಹಾಗೂ ದಿ ಯುನಿವರ್ಸಿಟಿ ಆಫ್ ಬ್ರಿಟಿಷ್ ಕೊಲಂಬಿಯಾ ಕ್ರಮವಾಗಿ ಎರಡನೇ ಹಾಗೂ ಮೂರನೇ ಸ್ಥಾನ ಗಳಿಸಿವೆ’ ಎಂದು ಇಂಧನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.