ADVERTISEMENT

ಅಳುವ ಬಾಲಕಿ ಚಿತ್ರಕ್ಕೆ ಪ್ರಶಸ್ತಿ

ಅಮೆರಿಕ ಗಡಿಯಲ್ಲಿ ಅಕ್ರಮ ವಲಸಿಗರ ಸಂಕಷ್ಟ ಬಿಂಬಿಸಿದ ಚಿತ್ರ

ಏಜೆನ್ಸೀಸ್
Published 12 ಏಪ್ರಿಲ್ 2019, 20:15 IST
Last Updated 12 ಏಪ್ರಿಲ್ 2019, 20:15 IST
ಪ್ರಶಸ್ತಿ ಪಡೆದ ಚಿತ್ರ
ಪ್ರಶಸ್ತಿ ಪಡೆದ ಚಿತ್ರ   

ಅಮ್‌ಸ್ಟರ್‌ಡಂ,ನೆದರ್‌ಲೆಂಡ್ಸ್: ಅಮೆರಿಕದ ಗಡಿಯಲ್ಲಿ ತಾಯಿಯ ಜೊತೆ ಅಧಿಕಾರಿಗಳು ವಶಕ್ಕೆ ಪಡೆದಿದ್ದ ಪುಟ್ಟ ಬಾಲಕಿ ಅಳುತ್ತಿರುವ ಮನಕಲಕುವ ಚಿತ್ರಕ್ಕೆ ಪ್ರತಿಷ್ಠಿತ ವರ್ಲ್ಡ್‌ ಪ್ರೆಸ್‌ ಫೊಟೊ ಪ್ರಶಸ್ತಿ ಲಭಿಸಿದೆ.

ಅಮೆರಿಕ ಮತ್ತು ಮೆಕ್ಸಿಕೊ ಗಡಿಯಲ್ಲಿ ಅಕ್ರಮವಾಗಿ ಪ್ರವೇಶಿಸಿದ ಹೊಂಡುರಸ್‌ನ ಸಾಂಡ್ರಾ ಸನ್‌ಚೇಜ್‌ ಮತ್ತು ಮಗಳು ಯನೇಲಾ ಅವರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದ ಸಂದರ್ಭದಲ್ಲಿ ಗೆಟ್ಟಿ ಇಮೇಜಸ್‌ನ ಛಾಯಾಗ್ರಾಹಕ ಜಾನ್‌ ಮೂರ್‌ ಈ ಚಿತ್ರವನ್ನು ಸೆರೆಹಿಡಿದಿದ್ದರು.

ತಾಯಿಯನ್ನು ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದಾಗ ಕಾಲಬುಡದಲ್ಲಿ ನಿಂತು ಭಯದಿಂದ ಅಳುತ್ತಿರುವ ಬಾಲಕಿ ಯನೇಳಾಳ ಚಿತ್ರ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿತ್ತು.

ADVERTISEMENT

ಈ ಚಿತ್ರಹಲವು ಮಾಧ್ಯಮಗಳಲ್ಲಿ ಪ್ರಕಟಗೊಂಡಿತ್ತು. ಅಕ್ರಮ ವಲಸಿಗರಿಂದ ಅವರ ಮಕ್ಕಳನ್ನು ಬೇರ್ಪಡಿಸುವ ಅಮೆರಿಕದ ನೀತಿಗೆ ವ್ಯಾಪಕ ಟೀಕೆ ಕೂಡ ವ್ಯಕ್ತವಾಗಿತ್ತು.

‘ಯನೇಲಾಳನ್ನು ತಾಯಿಯಿಂದ ಬೇರ್ಪಡಿಸಿಲ್ಲ’ ಎಂದು ಅನಂತರ ಅಮೆರಿಕದ ಗಡಿ ಭದ್ರತಾ ಪಡೆಯ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದರು. ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರು ವಲಸೆ ನೀತಿಯನ್ನು ಪರಿಷ್ಕರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.