ADVERTISEMENT

ತೋಷಖಾನಾ ಪ್ರಕರಣ: ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ಗೆ ಜಾಮೀನು

ಪಿಟಿಐ
Published 20 ನವೆಂಬರ್ 2024, 13:55 IST
Last Updated 20 ನವೆಂಬರ್ 2024, 13:55 IST
ಇಮ್ರಾನ್‌ ಖಾನ್‌ 
ಇಮ್ರಾನ್‌ ಖಾನ್‌    

ಇಸ್ಲಾಮಾಬಾದ್‌: ತೋಷಖಾನಾ ಹಗರಣಕ್ಕೆ ಸಂಬಂಧಿಸಿದ ಎರಡನೇ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರಿಗೆ ಇಸ್ಲಾಮಾಬಾದ್‌ ಹೈಕೋರ್ಟ್‌ ಬುಧವಾರ ಜಾಮೀನು ನೀಡಿದೆ.

ಅರ್ಜಿ ವಿಚಾರಣೆ ನಂತರ, ನ್ಯಾಯಮೂರ್ತಿ ಮಿಯಾನ್‌ಗುಲ್‌ ಹಸನ್‌ ಔರಂಗಜೇಬ್ ಅವರು ಜಾಮೀನು ಮಂಜೂರು ಮಾಡಿದರು.

ಇದನ್ನು ‘ತೋಷಖಾನಾ 2.0’ ಪ್ರಕರಣ ಎಂದೂ ಕರೆಯಲಾಗುತ್ತದೆ. ಸರ್ಕಾರಕ್ಕೆ ಬಂದ ಉಡುಗೊರೆಗಳನ್ನು ನಿಯಮಬಾಹಿರವಾಗಿ ಮಾರಾಟ ಮಾಡಿ, ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ ಆರೋಪವನ್ನು ಇಮ್ರಾನ್‌ ಖಾನ್‌ ಹಾಗೂ ಅವರ ಪತ್ನಿ ಬುಶ್ರಾ ಬೀಬಿ ಎದುರಿಸುತ್ತಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.