ADVERTISEMENT

'ಅವಿಶ್ವಾಸ'ದ ಮೂಲಕ ಅಧಿಕಾರ ಕಳೆದುಕೊಂಡ ಪಾಕ್‌ನ ಮೊದಲ ಪ್ರಧಾನಿ ಇಮ್ರಾನ್ ಖಾನ್‌ 

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಏಪ್ರಿಲ್ 2022, 5:29 IST
Last Updated 10 ಏಪ್ರಿಲ್ 2022, 5:29 IST
ಇಮ್ರಾನ್‌ ಖಾನ್‌
ಇಮ್ರಾನ್‌ ಖಾನ್‌    

ಇಸ್ಲಾಮಾಬಾದ್‌: ಇಮ್ರಾನ್ ಖಾನ್ ಅವರು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಅವಿಶ್ವಾಸ ನಿರ್ಣಯದ ಮೂಲಕಪದಚ್ಯುತಗೊಂಡಪಾಕಿಸ್ತಾನದ ಮೊದಲ ಪ್ರಧಾನಿಎನಿಸಿಕೊಂಡಿದ್ದಾರೆ.

ತಮ್ಮ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ತಡೆಯಲು ಇಮ್ರಾನ್‌ ಖಾನ್‌ ಹಲವುಪ್ರಯತ್ನ ಮಾಡಿದ್ದರು. ಸಂಸತ್ತನ್ನು ವಿಸರ್ಜಿಸುವುದಕ್ಕೆ ಅಧ್ಯಕ್ಷರಿಂದ ಅನುಮೋದನೆಯನ್ನೂ ಪಡೆದುಕೊಂಡಿದ್ದರು.ಆದರೆ, ಪಾಕಿಸ್ತಾನದ ಸುಪ್ರೀಂ ಕೋರ್ಟ್‌ ಪಾಕ್‌ ಸಂಸತ್‌ ಅನ್ನು ಪುನರ್‌ಸ್ಥಾಪನೆ ಮಾಡಿದ್ದೂ ಅಲ್ಲದೇ, ಅವಿಶ್ವಾಸ ನಿರ್ಣಯ ಮಂಡನೆಗೆ ಸೂಚನೆಯನ್ನೂ ನೀಡಿತ್ತು. ಅದರಂತೆ ಶನಿವಾರ ರಾತ್ರಿ ಮಂಡನೆಯಾದ ಅವಿಶ್ವಾಸ ನಿರ್ಣಯದಲ್ಲಿ ಖಾನ್‌ ಸೋತಿದ್ದಾರೆ.

ಒಟ್ಟು342 ಸದಸ್ಯ ಬಲದ ಸಂಸತ್‌ನಲ್ಲಿ ಅವಿಶ್ವಾಸ ನಿರ್ಣಯದ ಪರವಾಗಿ 174 ಸದಸ್ಯರು ಮತ ಚಲಾಯಿಸಿದರು.

ADVERTISEMENT

ಪಾಕಿಸ್ತಾನದ ಇತಿಹಾಸದಲ್ಲಿ ಯಾವ ಪ್ರಧಾನಿಯೂ ಅಧಿಕಾರದ ಪೂರ್ಣ ಅವಧಿ ಪೂರೈಸಿಲ್ಲ. ಅದೇ ರೀತಿ ಇಮ್ರಾನ್‌ ಅವರೂ ತಮ್ಮ ಅಧಿಕಾರ ಪೂರೈಸುವಲ್ಲಿ ವಿಫಲರಾಗಿದ್ದಾರೆ.ಅದರ ಜತೆಗೇ, ಅವಿಶ್ವಾಸ ನಿರ್ಣಯದ ಮೂಲಕ ಪದಚ್ಯುತಿಗೊಂಡ ಮೊದಲ ಪ್ರಧಾನಿ ಎಂಬ ಕಳಂಕ ಅವರಿಗೆ ಅಂಟಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.