ADVERTISEMENT

ಜೈಲು ಶಿಕ್ಷೆಗೆ ಇಮ್ರಾನ್ ಅಪರಾಧಗಳೆ ಸಾಕು: ರಕ್ಷಣಾ ಸಚಿವ ಖವಾಜಾ ಆಸೀಫ್

ಮಾಜಿ ಪ್ರಧಾನಿ ಆರೋಪವನ್ನು ತಳ್ಳಿ ಹಾಕಿದ ರಕ್ಷಣಾ ಸಚಿವ

ಪಿಟಿಐ
Published 18 ಸೆಪ್ಟೆಂಬರ್ 2024, 15:29 IST
Last Updated 18 ಸೆಪ್ಟೆಂಬರ್ 2024, 15:29 IST
ಖವಾಜಾ ಆಸೀಫ್
ಖವಾಜಾ ಆಸೀಫ್   

ಇಸ್ಲಾಮಾಬಾದ್: ಇಮ್ರಾನ್‌ ಖಾನ್‌ ಅವರನ್ನು ಜೈಲಿನಲ್ಲಿಡಲು ಅವರು ಎಸಗಿರುವ ಅಪರಾಧ ಕೃತ್ಯಗಳೇ ಸಾಕು ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸೀಫ್ ಅವರು ತಿಳಿಸಿದ್ದಾರೆ.

‘ನನ್ನನ್ನು ಶಾಶ್ವತವಾಗಿ ಜೈಲಿನಲ್ಲಿರಿಸುವ ಸಲುವಾಗಿ ಸರ್ಕಾರ ಸಂವಿಧಾನದಲ್ಲಿ ತಿದ್ದುಪಡಿ ಮಾಡಲು ಮುಂದಾಗಿದೆ’ ಎಂಬ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಅವರ ಆರೋಪವನ್ನು ಖವಾಜಾ ತಳ್ಳಿ ಹಾಕಿದ್ದಾರೆ.

‘ಪಾಕಿಸ್ತಾನ ತೆಹ್ರಿಕ್‌ ಇ–ಇನ್ಸಾಫ್‌ (ಪಿಟಿಐ) ಪಕ್ಷದ ಸಂಸ್ಥಾಪಕ ಇಮ್ರಾನ್ ಅಪರಾಧಗಳ ಪಟ್ಟಿಯನ್ನು ನೀಡಿದರೆ, ಅವರಿಗೆ ಶಿಕ್ಷೆ ನೀಡಲು ಸಂವಿಧಾನ ತಿದ್ದುಪಡಿಯ ಅವಶ್ಯಕತೆ ಇರುವುದಿಲ್ಲ’ ಎಂದು ಖವಾಜ ತಿಳಿಸಿದ್ದಾರೆ.

ADVERTISEMENT

‘ಜೈಲಿನಲ್ಲಿರುವ ಇಮ್ರಾನ್ ಅವರು ಸಂವಿಧಾನ ತಿದ್ದುಪಡಿ ಮಾತ್ರವಲ್ಲದೇ ಪಾಕಿಸ್ತಾನದಲ್ಲಿ ನಡೆಯುವ ಎಲ್ಲ ಬೆಳವಣಿಗೆಗಳು ತನಗೆ ಸಂಬಂಧಿಸಿದ್ದು ಎಂದು ಭಾವಿಸಿದ್ದಾರೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.