ಲಾಹೋರ್: ದೊಡ್ಡ ಮಟ್ಟದ ಪಕ್ಷಾಂತರದಿಂದಾಗಿ ಪದುಚ್ಯುತ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್–ಎ–ಇನ್ಸಾಫ್ (ಪಿಟಿಐ) ಪಕ್ಷವು ಈಗ ರಿಕ್ಷಾದಲ್ಲೂ ಹೊಂದಿಕೊಳ್ಳಬಹುದು. ಪಕ್ಷದಲ್ಲಿ ಅಷ್ಟು ಜನ ಮಾತ್ರ ಇದ್ದಾರೆ ಎಂದು ಪಾಕಿಸ್ತಾನ ಮುಸ್ಲಿಂ ಲೀಗ್ ನವಾಜ್ (ಪಿಎಂಎಲ್-ಎನ್) ಹಿರಿಯ ಉಪಾಧ್ಯಕ್ಷೆ ಮರಿಯಂ ನವಾಜ್ ಎಂದು ವ್ಯಂಗ್ಯವಾಡಿದ್ದಾರೆ.
ಪಂಜಾಬ್ ಪ್ರಾಂತ್ಯದ ಶುಜಾಬಾದ್‌ನಲ್ಲಿ ನಡೆದ ಯುವ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಇಮ್ರಾನ್ ಅವರೇ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಮುಖ್ಯ ಸಂಘಟಕ, ವಕ್ತಾರ ಮತ್ತು ಪಕ್ಷದ ಏಕೈಕ ಅಭ್ಯರ್ಥಿ ಎಲ್ಲವೂ ಆಗಿದ್ದಾರೆ ಎಂದರು.
ಮೇ 9ರ ಹಿಂಸಾಚಾರದ ಹಿನ್ನೆಲೆಯಲ್ಲಿ ಹಲವು ಮುಖಂಡರು, ನಾಯಕರು ಪಕ್ಷವನ್ನು ತೊರೆದಿದ್ದಾರೆ. ಈಗ ಇಡೀ ವಿರೋಧ ಪಕ್ಷವು ‘ಕ್ವಿಂಗ್ಕಿ ರಿಕ್ಷಾ’ದಲ್ಲಿ ಹೊಂದಿಕೊಳ್ಳಬಹುದು ಎಂದಿದ್ದಾರೆ.
ಇಮ್ರಾನ್ ತಮ್ಮ 26 ವರ್ಷಗಳ ರಾಜಕೀಯ ಹೋರಾಟದ ಬಗ್ಗೆ ಮಾತನಾಡಿದ್ದಾರೆ. ಆದರೆ, ಅವರ 26 ವರ್ಷಗಳ ಸುದೀರ್ಘ ಹೋರಾಟ ಕಿತ್ತು ಹಾಕಲು ಕೇವಲ 26 ನಿಮಿಷ ಬೇಕಾಯಿತು. ಅವ್ಯವಸ್ಥೆ ಮತ್ತು ಅರಾಜಕತೆಯ ಅಧ್ಯಾಯ ಕೊನೆಗೊಂಡಿದೆ ಮತ್ತು ಈಗ ಪ್ರಗತಿಯ ಪಯಣ ಪ್ರಾರಂಭವಾಗಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.