ADVERTISEMENT

ಸರ್ಕಾರದ ವಿರುದ್ಧದ ಧರಣಿ ಬೆಂಬಲಿಸಿ: ಜೈಶಂಕರ್‌ಗೆ ಪಿಟಿಐ ನಾಯಕನ ಮನವಿ

ಪಿಟಿಐ
Published 5 ಅಕ್ಟೋಬರ್ 2024, 15:51 IST
Last Updated 5 ಅಕ್ಟೋಬರ್ 2024, 15:51 IST
 ಎಸ್.ಜೈಶಂಕರ್‌
 ಎಸ್.ಜೈಶಂಕರ್‌   

ಇಸ್ಲಾಮಾಬಾದ್‌: ‘ಪಾಕಿಸ್ತಾನದ ಸರ್ಕಾರದ ವಿರುದ್ಧ ನಡೆಯುತ್ತಿರುವ ಧರಣಿಯಲ್ಲಿ ಭಾಗವಹಿಸಿ, ಬೆಂಬಲಿಸಬೇಕು’ ಎಂದು  ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ನಾಯಕರೊಬ್ಬರು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ರಿಗೆ ಕೋರಿದ್ದಾರೆ.

‘ಪ್ರತಿಭಟನೆಯಲ್ಲಿ ಭಾಗವಹಿಸಿ, ಜನರೊಂದಿಗೆ ಮಾತನಾಡಲು ಜೈಶಂಕರ್ ಅವರಿಗೆ ಪಿಟಿಐ ಆಹ್ವಾನಿಸುತ್ತಿದೆ’ ಎಂದು ಖೈಬರ್ ಪಖ್ತುಂಖ್ವಾ ಮುಖ್ಯಮಂತ್ರಿ ಮಾಹಿತಿ ಸಲಹೆಗಾರ ಮುಹಮ್ಮದ್ ಅಲಿ ಸೈಫ್ ’ಜಿಯೋ ನ್ಯೂಸ್‘ ಕಾರ್ಯಕ್ರಮವೊಂದರಲ್ಲಿ ಹೇಳಿದರು.

ಅಕ್ಟೋಬರ್ 15 ಮತ್ತು 16 ರಂದು ಪಾಕಿಸ್ತಾನದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜೈಶಂಕರ್ ಅವರು ಭೇಟಿ ನೀಡಲಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.