ವಾಷಿಂಗ್ಟನ್: ಭಾರತ–ಪಾಕಿಸ್ತಾನದ ನಡುವೆ ರಚನಾತ್ಮಕ ಮಾತುಕತೆ ಮತ್ತು ಸಂವಾದ ನಡೆಯಬೇಕು ಎಂದು ಅಮೆರಿಕ ಬಯಸುತ್ತದೆ ಎಂದು ಅಧ್ಯಕ್ಷ ಜೋ ಬೈಡನ್ ನೇತೃತ್ವದ ಸರ್ಕಾರ ಗುರುವಾರ ತಿಳಿಸಿದೆ.
‘ಮಾತುಕತೆಯ ಸ್ವರೂಪವನ್ನು ಉಭಯ ದೇಶಗಳೇ ನಿರ್ಧರಿಸಬೇಕು. ಎರಡು ದೇಶಗಳು ಒಪ್ಪುವುದಾದರೆ ಅಮೆರಿಕ ತನ್ನ ಪಾತ್ರ ವಹಿಸಲು ಸಿದ್ಧವಾಗಿದೆ’ ಎಂದೂ ಹೇಳಿದೆ.
ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್, ಭಾರತ–ಪಾಕಿಸ್ತಾನದ ನಡುವಿನ ಮಾತುಕತೆಯಲ್ಲಿ ಅಮೆರಿಕ ಹಸ್ತಕ್ಷೇಪ ಮಾಡುವುದಿಲ್ಲ. ಉಭಯ ದೇಶಗಳು ನೆರವು ಬಯಸಿದಲ್ಲಿ ಅದಕ್ಕೆ ಸಿದ್ಧವಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.