ADVERTISEMENT

ನಾವೀನ್ಯತೆಗಳ ಆವಿಷ್ಕಾರಗಳಲ್ಲಿ ಭಾರತ ಜಾಗತಿಕ ನಾಯಕ: ಬಿಲ್ ಗೇಟ್ಸ್

ಪಿಟಿಐ
Published 17 ಆಗಸ್ಟ್ 2024, 2:52 IST
Last Updated 17 ಆಗಸ್ಟ್ 2024, 2:52 IST
<div class="paragraphs"><p>ಬಿಲ್ ಗೇಟ್ಸ್</p></div>

ಬಿಲ್ ಗೇಟ್ಸ್

   

(ರಾಯಿಟರ್ಸ್ ಚಿತ್ರ)

ವಾಷಿಂಗ್ಟನ್: 'ನಾವೀನತ್ಯೆಗಳ ಆವಿಷ್ಕಾರಗಳಲ್ಲಿ ಭಾರತ ಜಾಗತಿಕ ನಾಯಕ' ಎಂದು ಅಮೆರಿಕದ ಖ್ಯಾತ ಉದ್ಯಮಿ, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಕೊಂಡಾಡಿದ್ದಾರೆ.

ADVERTISEMENT

ಸಿಯಾಟಲ್‌ನಲ್ಲಿ ಹೊಸದಾಗಿ ತೆರೆದಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅವರು, ಭಾರತೀಯ ಮೂಲದ ಅಮೆರಿಕನ್ನರನ್ನು ಉದ್ದೇಶಿಸಿ ಮಾತನಾಡಿದರು.

ಸುಮಾರು 2,000ಕ್ಕೂ ಹೆಚ್ಚು ಭಾರತೀಯ ಮೂಲದ ಅಮೆರಿಕನ್ನರನ್ನು ಉದ್ದೇಶಿಸಿ ಮಾತನಾಡಿದ ಅವರು 'ತಂತ್ರಜ್ಞಾನ, ಕೃಷಿ, ಆರೋಗ್ಯ ಮತ್ತು ರಕ್ಷಣೆಯಂತಹ ಕ್ಷೇತ್ರಗಳಲ್ಲಿ ನಾವೀನ್ಯತೆಯ ಆವಿಷ್ಕಾರಗಳಲ್ಲಿ ಭಾರತ ಜಾಗತಿಕ ನಾಯಕ' ಎಂದು ಉಲ್ಲೇಖಿಸಿದರು.

ಕಡಿಮೆ ವೆಚ್ಚದಲ್ಲಿ ಲಸಿಕೆ ತಯಾರಿಕೆ ಹಾಗೂ ಡಿಜಿಟಲ್ ಮೂಲಸೌಕರ್ಯದ ಕುರಿತು ಅವರು ಪ್ರತಿಪಾದಿಸಿದರು. ಇದು ಭಾರತೀಯರಿಗೆ ಮಾತ್ರವಲ್ಲದೆ ಇಡೀ ಜಗತ್ತಿಗೆ ನೆರವಾಗುತ್ತಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.